ನಾನು ಮದುವೆ ಆಗೋವರೆಗೂ ಹೋಟೆಲಿನಲ್ಲೇ ಸ್ನಾನ ಮಾಡ್ತಾ ಇದ್ದೆ ಎಂದು ಹಾಸ್ಟೆಲ್​ ವಿದ್ಯಾರ್ಥಿನಿಯರಿಗೆ ತಿಳಿಸಿದ ಸಿಎಂ ಸಿದ್ದರಾಮಯ್ಯ

| Updated By: ಸಾಧು ಶ್ರೀನಾಥ್​

Updated on: Aug 01, 2023 | 3:42 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉಡುಪಿ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ. ಉಡುಪಿಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್​ಗೆ ಸಿಎಂ ದಿಢೀರ್ ಭೇಟಿ ಕೊಟ್ಟಿದ್ದರು

ಉಡುಪಿ, ಆಗಸ್ಟ್​ 1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉಡುಪಿ ಜಿಲ್ಲೆಗೆ ಭೇಟಿ ಕೊಟ್ಟಿದ್ದಾರೆ. ಉಡುಪಿಯ (Udupi) ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್​ಗೆ ಸಿಎಂ ದಿಢೀರ್ ಭೇಟಿ ಕೊಟ್ಟಿದ್ದಾರೆ. ಅಲ್ಲಿನ ಮೆಟ್ರಿಕ್ ನಂತರದ ಸರ್ಕಾರಿ ಹಾಸ್ಟೆಲ್​ ವಿದ್ಯಾರ್ಥಿನಿಯರ (girls hostel) ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದರು. ನಿಮಗೆ ಹಣ ಸಿಗಲ್ಲ, ನಿಮ್ಮ ಅಮ್ಮನಿಗೆ ಹಣ ಸಿಗುತ್ತೆ ಎಂದು ಸಿಎಂ ಹೇಳಿದರು. ಡಿಗ್ರಿ ಪಾಸಾದ ಮೇಲೆ ಕೆಲಸ ಸಿಗುವ ತನಕ ಯುವನಿಧಿ ನೀಡ್ತೇವೆ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಹಾಸ್ಟೆಲ್​ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಉಪಸ್ಥಿತಿಯಿದ್ದರು.

ಈ ವೇಳೆ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರು ತಮ್ಮ ಬೇಡಿಕೆಯನ್ನು ಸಿಎಂ ಮುಂದಿಟ್ಟರು – ಫೈನಲ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅಗತ್ಯ ಇದೆ. ನಮಗೆ ಲ್ಯಾಪ್ ಟಾಪ್ ಕೊಡಿ ಅಂತ ಬೇಡಿಕೆ ಇಟ್ಟರು. ತದನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಊಟ ಏನೇನು ಕೊಡ್ತಾರಮ್ಮಾ? ಅಡುಗೆ ಮಾಡೋಕ್ಕೆ ಬರುತ್ತ ನಿಮಗೆಲ್ಲಾ? ಎಂದು ವಿದ್ಯಾರ್ಥಿನಿಯರಿಗೆ ಕೇಳಿದರು. ಇದೇ ವೇಳೆ, ನಾನು ಮದುವೆ ಆಗೋವರೆಗೂ ಹೋಟೆಲಿನಲ್ಲೇ ಸ್ನಾನ ಮಾಡ್ತಾ ಇದ್ದೆ ಎಂದು ನಗೆಯಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 01, 2023 03:39 PM