ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ಪೋಷಕರು ಬಯಸಿದ್ದಾರೆ, ಅದಕ್ಕಾಗಿ ಅವರು ಅಪೀಲ್ ಹೋಗಬೇಕಾಗುತ್ತದೆ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದೆ. ಅದರೆ ಸೌಜನ್ಯಳ ಪೋಷಕರು ತನಿಖೆಯಿಂದ ಸಂತುಷ್ಟರಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು,
ಮಂಗಳೂರು: ಮಳೆಪೀಡಿತ ಕರಾವಳಿ ಜಿಲ್ಲೆಗಳ ವೀಕ್ಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಮಂಗಳೂರಿಗೆ ಆಗಮಿಸಿದರು. ನಗರದ ಏರ್ಪೋರ್ಟ್ ನಲ್ಲಿ (Mangaluru airport) ಸುದ್ದಿಗಾರರೊಂದಿಗೆ ಮಾತಾಡಿದ ಅವರು ನೈತಿಕ ಪೊಲೀಸ್ ಗಿರಿ (moral policing) ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸೌಜನ್ಯ ಹತ್ಯೆ ಪ್ರಕರಣ (Soujanya murder case) ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಿದೆ. ಅದರೆ ಸೌಜನ್ಯಳ ಪೋಷಕರು ತನಿಖೆಯಿಂದ ಸಂತುಷ್ಟರಾಗಿಲ್ಲ, ಹಾಗಾಗಿ ಅವರು ಮರುತನಿಖೆ ಕೋರಿದ್ದಾರೆ. ಅದಕ್ಕಾಗಿ ಅವರು ಕೋರ್ಟ್ ಗೆ ಅಪೀಲ್ ಮಾಡಬೇಕಾಗುತ್ತದೆ. ಕಾನೂನಲ್ಲಿ ಯಾವುದಕ್ಕೆಲ್ಲ ಅವಕಾಶವಿದೆ ಅಂತ ನೋಡಬೇಕಾಗುತ್ತದೆ ಎಂದು ಹೇಳಿದರು. ಪ್ರಕರಣದಲ್ಲಿ ಸಿಬಿಐ ವರದಿಯನ್ನು ಈಗಾಗಲೇ ತಮಗೆ ತಲುಪಿಸಲಾಗಿದ್ದರೂ ಇನ್ನೂ ಓದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ