ನಿನ್ನೆ ನಾಟಿ ಕೋಳಿ ಸಾರು, ಇಂದು ಕರಾವಳಿ ಫಿಶ್! ಮಂಗಳೂರಿಗೆ ಬಂದ ಸಿದ್ದರಾಮಯ್ಯಗೆ ಬಗೆ ಬಗೆ ಖಾದ್ಯ

Updated on: Dec 03, 2025 | 3:33 PM

ಸಿಎಂ ಸಿದ್ದರಾಮಯ್ಯ ನಿವಾಸದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಸಿಎಂ ಡಿಸಿಎಂ ಇಬ್ಬರೂ ಸೇರಿ ಮೈಸೂರು ಶೈಲಿಯ ನಾಟಿಕೋಳಿ ಸಾರು ಸವಿದಿದ್ದರು. ಇದೀಗ ಮಂಗಳೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಓಷನ್ ಪರ್ಲ್ ಹೋಟೆಲ್‌ನಲ್ಲಿ ವಿಶೇಷ ಕರಾವಳಿ ಶೈಲಿಯ ಊಟವನ್ನು ಮಾಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಅಂಜಲ್ ಫಿಶ್ ಫ್ರೈ, ಪಾಂಪ್ಲೆಟ್ ರವಾ ಫ್ರೈ, ಕಾನೆ ಫಿಶ್ ಕರಿ, ನೀರು ದೋಸೆ, ಆಪ್ಪಂ, ಗೀ ರೋಸ್ಟ್, ಬಾಯ್ಲ್ಡ್ ರೈಸ್ ಸೇರಿ ವಿವಿಧ ಖಾದ್ಯಗಳನ್ನು ಸಿಎಂ ಸೇವಿಸಿ ಆನಂದಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಿ ಕೋಳಿ ಸಾರನ್ನು ಇಷ್ಟಪಡುತ್ತಾರೆ ಎಂದು ತಿಳಿದು ಅದನ್ನೂ ಸಹ ವಿಶೇಷವಾಗಿ ತಯಾರಿಸಲಾಗಿತ್ತು.

ಮಂಗಳೂರು, ಡಿಸೆಂಬರ್ 03:  ಡಿಸಿಎಂ ಡಿಕೆ ಶಿವಕುಮಾರ್​​ ನಿವಾಸದಲ್ಲಿ  ಮೈಸೂರು ಶೈಲಿಯ ನಾಟಿಕೋಳಿ ಸಾರು ಸವಿದಿದ್ದ ಸಿಎಂ ಸಿದ್ದರಾಮಯ್ಯಗೆ ಇಂದು (ಡಿಸೆಂಬರ್ 03)  ಮಂಗಳೂರಿನಲ್ಲಿ ಕರಾವಳಿ ಮೀನಿನ ಬಗೆ ಬಗೆಯ ಖಾದ್ಯವನ್ನು ಉಣಬಡಿಸಲಾಗಿದೆ.

ಇಂದು (ಡಿಸೆಂಬರ್ 03) ಉಳ್ಳಾಲದಲ್ಲಿ ನಡೆದ ಗುರು-ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಸಿದ್ದರಾಮಯ್ಯ , ಕೆಸಿ ವೇಣುಗೋಪಾಲ್ ಸೇರಿದಂತೆ ಇತರೆ ಸಚಿವರುಗಳಿಗೆ ಕರಾವಳಿ ನಾಟಿ ಕೋಳಿ, ನೀರ್‌ ದೋಸೆ, ಮೀನು ವಿಶೇಷ ಮೆನು ಸಿದ್ಧಪಡಿಸಲಾಗಿದ್ದು ಮಂಗಳೂರಿನ ಪ್ರಸಿದ್ಧ ಅಂಜಲ್ ಫಿಶ್ ಫ್ರೈ, ಪಾಂಪ್ಲೆಟ್ ರವಾ ಫ್ರೈ, ಕಾನೆ ಫಿಶ್ ಕರಿ, ನೀರು ದೋಸೆ, ಆಪ್ಪಂ, ಗೀ ರೋಸ್ಟ್, ಬಾಯ್ಲ್ಡ್ ರೈಸ್ ಸೇರಿ ವಿವಿಧ ಖಾದ್ಯಗಳನ್ನು ಸೇವಿಸಿ ಆನಂದಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಿ ಕೋಳಿ ಸಾರನ್ನು ಇಷ್ಟಪಡುತ್ತಾರೆ ಎಂದು ತಿಳಿದು ಅದನ್ನೂ ಸಹ ವಿಶೇಷವಾಗಿ ತಯಾರಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.