ಎಟಿಎಮ್ ಕಿಯಾಸ್ಕ್ ನಲ್ಲಿ ತುಂಬಿಸಬೇಕಿದ್ದ ಹಣದೊಂದಿಗೆ ಬಳ್ಳಾರಿಯಿಂದ ಪರಾರಿಯಾಗಿದ್ದ ಕಸ್ಟೋಡಿಯನ್ ಕೊಪ್ಪಳದಲ್ಲಿ ಸಿಕ್ಕಿಬಿದ್ದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 23, 2022 | 7:49 PM

ಎಟಿಎಮ್ ಕಿಯಾಸ್ಕ್ ಗಳಲಿ ಹಣದ ವಾಹನಗಳ ಡ್ರೈವರ್ ಮತ್ತು ಕಸ್ಟೋಡಿಯನ್ ವ್ಯಾನ್ ಮತ್ತು ಹಣದೊಂದಿಗೆ ಪರಾರಿಯಾಗುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅದರೆ ಲೂಟಿ ಮಾಡಿಕೊಂಡು ಹೋದ ಹಣದಿಂದ ಬದುಕುವುದು ಮಾತ್ರ ಅವರಿಗೆ ಸಾಧ್ಯವಾಗುವುದಿಲ್ಲ

ಬಳ್ಳಾರಿ:  ಇಲ್ಲಿ ಟೇಬಲ್ ಮೇಲೆ ಇಟ್ಟಿರುವ ಹಣ ನೋಡಿ. ಅದನ್ನು ಎಣಿಸಲು ನಮ್ಮಂಥವರಿಗೆ ಒಂದು ವಾರದ ಸಮಯವೂ ಕಮ್ಮಿಯಾದೀತು, ಹೌದು ತಾನೆ? ಇಲ್ಲಿರೋದು ರೂ. 56.18 ಲಕ್ಷ ಮಾರಾಯ್ರೇ. ಅಂದಹಾಗೆ ಇಷ್ಟೂ ಹಣವನ್ನು ಒಬ್ಬ ಕಳ್ಳನಿಂದ ವಶಪಡಿಸಿಕೊಳ್ಳಲಾಗಿದೆ. ಅವನು ಕಳ್ಳನೋ ಲೂಟಿಕೋರನೋ ಅಂತ ನೀವೇ ನಿರ್ಧರಿಸಿ. ಬಿಸಿಲು ನಾಡು ಬಳ್ಳಾರಿಯಲ್ಲಿ (Ballari) ನಡೆದ ಘಟನೆಯನ್ನು ನಿಮಗೆ ವಿಡಿಯೋನಲ್ಲಿ ತೋರಿಸುತ್ತಿದ್ದೇವೆ. ಬಳ್ಳಾರಿ ಬ್ರೂಸಪೇಟೆಯ (Bruce Pete) ಪೊಲೀಸರ ನಡುವೆ ನಿಂತಿರುವ ಖದೀಮನಿಗೆ ಮೇ 21 ರಂದು ಮೀನಾಕ್ಷಿ ವೃತ್ತದಲ್ಲಿರುವ ಕರ್ನಾಟಕ ಬ್ಯಾಂಕಿನ (Karnataka Bank) ಎಟಿಎಮ್ ಕಿಯಾಸ್ಕ್ನಲ್ಲಿ ಹಣ ತುಂಬಿಸಲು ಹಣ ನೀಡಲಾಗಿತ್ತು. ಹೌದು ಮಾರಾಯ್ರೇ, ಇವನು ನಗರದ ಸಿ ಎಮ್ ಎಸ್ ಕಂಪನಿಯಲ್ಲಿ ಕಸ್ಟೋಡಿಯನ್ ಅಗಿ ಕೆಲಸ ಮಾಡುತ್ತಾನೆ ಮತ್ತು ಇವನ ಹೆಸರು ನೀಲಕಂಠ.

ಅದರೆ ನೀಲಕಂಠ ಸದರಿ ಎಟಿಎಮ್ ಕಿಯಾಸ್ಕ್ನಲ್ಲಿ ಹಣ ತುಂಬದೆ ಅದರೊಂದಿಗೆ ಕೊಪ್ಪಳಕ್ಕೆ ಪರಾರಿಯಾಗಿದ್ದ. ಅವನನ್ನು ಹುಡುಕುವುದು ಪೊಲೀಸರಿಗೆ ಕಷ್ಟವೇನೂ ಅಗಿಲ್ಲ. ಬಳ್ಳಾರಿಯಿಂದ ಕೊಪ್ಪಳ ಅಬ್ಬಬ್ಬಾ ಎಂದರೆ 100 ಕಿಮೀ ದೂರ ಇರಬಹುದು. ರೋಡಿಂದ ಪ್ರಯಾಣಿಸಿದರೆ ಎರಡೂವರೆ ಗಂಟೆಯಲ್ಲಿ ಅಲ್ಲಿಗೆ ಮುಟ್ಟಬಹುದು. ನೀಲಕಂಠನ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿಕೊಂಡ ಹೋದ ಬ್ರೂಸ್ ಪೇಟೆ ಪೊಲೀಸರ ಕೈಯಲ್ಲಿ ಅವನು ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ.

ಎಟಿಎಮ್ ಕಿಯಾಸ್ಕ್ ಗಳಲಿ ಹಣದ ವಾಹನಗಳ ಡ್ರೈವರ್ ಮತ್ತು ಕಸ್ಟೋಡಿಯನ್ ವ್ಯಾನ್ ಮತ್ತು ಹಣದೊಂದಿಗೆ ಪರಾರಿಯಾಗುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಅದರೆ ಲೂಟಿ ಮಾಡಿಕೊಂಡು ಹೋದ ಹಣದಿಂದ ಬದುಕುವುದು ಮಾತ್ರ ಅವರಿಗೆ ಸಾಧ್ಯವಾಗುವುದಿಲ್ಲ. ಒಂದೆರಡು ದಿನಗಳಲ್ಲೇ ಲೂಟಿಕೋರರು ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ.

ನೀಲಕಂಠನಿಂದ ಪೊಲೀಸರು ಹಣ, ಎರಡು ಮೊಬೈಲ್ ಫೋನ್ ಮತ್ತು ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:    ಸೋದರಿಯರ ಮದುವೆ ಸಾಲ ತೀರಿಸಲು ಶಾಲೆಯ ಹಣ ಬಳಸಿಕೊಂಡ ಮುಖ್ಯ ಶಿಕ್ಷಕ; 36 ಲಕ್ಷ ರೂ ಲೂಟಿ, ಸೈಬರ್ ಕ್ರೈಂ ಠಾಣೆಗೆ ದೂರು