ನನ್ನ ಈ ಮುಖ ಯಾರಿಗೂ ತಿಳಿಯುವುದು ಬೇಡ ಎಂದಿದ್ದರು ಅಪರ್ಣಾ

|

Updated on: Jul 12, 2024 | 1:57 PM

‘ಮಜಾ ಟಾಕೀಸ್​’ನಲ್ಲಿ ಹಲವು ವರ್ಷ ಅಪರ್ಣಾ ವಸ್ತಾರೆ ಜೊತೆಗೆ ಒಟ್ಟಿಗೆ ನಟಿಸಿದ್ದ ನಟಿ ಶ್ವೇತಾ ಚೆಂಗಪ್ಪ ಅವರು ಅಪರ್ಣಾರ ಬಗ್ಗೆ ಅವರು ಅನುಭವಿಸುತ್ತಿದ್ದ ನೋವಿನ ಬಗ್ಗೆ ಮಾತನಾಡಿದ್ದಾರೆ.

ಖ್ಯಾತ ನಿರೂಪಕಿ, ನಟಿ ಅಪರ್ಣಾರ ಸಾವು ಹಲವರಿಗೆ ಆಘಾತ ತಂದಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಅಪರ್ಣಾ, ತಾವು ಅನಾರೋಗ್ಯದಿಂದ ಬಳಲುತ್ತಿರುವ ವಿಷಯವನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ಕುಟುಂಬದವರಿಗೆ ಬಿಟ್ಟರೆ ಅಪರ್ಣಾರಿಗೆ ಕ್ಯಾನ್ಸರ್ ಆಗಿರುವ ವಿಷಯ ಹೆಚ್ಚಿನ ಜನರಿಗೆ ಗೊತ್ತೇ ಇರಲಿಲ್ಲ. ಇಂದು ಅಪರ್ಣಾರ ಅಂತಿಮ ದರ್ಶನ ಪಡೆದ ಅವರ ‘ಮಜಾ ಟಾಕೀಸ್’ ಶೋನ ಸಹನಟಿ ಶ್ವೇತ ಚೆಂಗಪ್ಪ, ಟಿವಿ9 ಜೊತೆಗೆ ಮಾತನಾಡುತ್ತಾ, ‘ಅವರು ಒಳಗೆ ಅಷ್ಟು ನೋವಿಟ್ಟುಕೊಂಡಿದ್ದರೂ ಸಹ ಅದನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ನನ್ನ ಈ ನೋವು, ನನ್ನ ಈ ನೋವಿನ ಮುಖ ಯಾರಿಗೂ ತಿಳಿಯುವುದು ಬೇಡ’ ಎಂದೇ ಹೇಳಿದ್ದರು. ಅದಕ್ಕೆ ನಿಜಕ್ಕೂ ಬಹಳ ಧೈರ್ಯ ಬೇಕು ಎಂದಿದ್ದಾರೆ ಶ್ನೇತ ಚೆಂಗಪ್ಪ. ಅಪರ್ಣಾ ಅವರ ಬಗ್ಗೆ ಇನ್ನೂ ಹಲವು ವಿಷಯಗಳನ್ನು ಶ್ವೇತಾ ಚೆಂಗಪ್ಪ ಮಾತನಾಡಿದ್ದಾರೆ. ವಿಡಿಯೋ ನೋಡಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 12, 2024 01:06 PM