“ಬಾ ವರು ಮತ್ತೆ ಮಜಾ ಟಾಕೀಸ್ ಮಾಡೋಣ”, ಅಪರ್ಣಾ ಪಾರ್ಥಿವ ಶರೀರದ ಮುಂದೆ ಮಜಾ ತಂಡ ಕಣ್ಣೀರು
ಕಾಣದ ಊರಿಗೆ ಪಯಣ ಬೆಳೆಸಿದ ಅಪರ್ಣಾ, ಚಿತ್ರರಂಗವನ್ನು ಒಬ್ಬಂಟಿ ಮಾಡಿದ್ದಾರೆ. ನಟಿಯಾಗಿ, ನಿರೂಪಕಿಯಾಗಿ ಎಲ್ಲರನ್ನೂ ಸಂತೃಪ್ತ ಮಾಡಿದ ಅಪರ್ಣಾ ಇನ್ನಿಲ್ಲ ಎಂಬುದನ್ನು ಕೇಳಲು ಸಾಧ್ಯವಿಲ್ಲ. ಮಜಾ ಟಾಕೀಸ್ ಮೂಲಕ ಇಡಿ ಕರ್ನಾಟಕವನ್ನು ನಗಿಸಿದ ವರು ಮುಂದೆ ಮಜಾ ತಂಡ ಕಣ್ಣೀರು ಹಾಕಿದೆ. ಆ ವಿಡಿಯೋ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ ರಂಗ ಕಂಡ ಅದ್ಭುತ ಪ್ರತಿಭೆ ನಿರೂಪಕಿ, ನಟಿ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ. ಇದೀಗ ಎಲ್ಲ ಕಡೆ ಅವರ ಸಾವಿನ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಕೆಲ ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅಪರ್ಣಾ. ಇದೀಗ ಮರೆಯಾಗಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲೂ ಕೂಡ ಮಿಂಚಿದ್ದರು ಈ ನಟಿ. ಅಪರ್ಣಾ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಅವರು ಪಾರ್ಥಿವ ಶರೀರ ನೋಡಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಚಿತ್ರರಂಗದ ಗಣ್ಯರು ಕೂಡ ಬಂದಿದ್ದಾರೆ. ಇದರ ನಡುವೆ ಮಜಾ ಟಾಕೀಸ್ ಕಾಮಿಡಿ ಮೂಲಕವೇ ಹೆಸರು ಮಾಡಿದ್ದ ವರಲಕ್ಷ್ಮೀ (ಅಪರ್ಣಾ) ಇನ್ನು ಮುಂದೆ ಇಲ್ಲ ಎಂಬ ಸುದ್ದಿ ಕೇಳಿ ಮಜಾ ಟಾಕೀಸ್ ತಂಡ ಓಡೋಡಿ ಬಂದಿದೆ. ಅವರು ಜತೆಗೆ ಈ ಶೋನಲ್ಲಿ ನಡೆಸಿದ್ದ ನಟರು ಹಾಗೂ ಸಿಬ್ಬಂದಿಗಳು ಅವರು ಪಾರ್ಥಿವ ಶರೀರ ನೋಡಿ ಕಣ್ಣೀರು ಹಾಕಿದ್ದಾರೆ. ನಟಿ ಶ್ವೇತಾ ಚೆಂಗಪ್ಪ ಸೇರಿದಂತೆ ತಮ್ಮ ಗೆಳತಿಯನ್ನು ಕೊನೆಯ ಬಾರಿ ನೋಡಲು ತಂಡ ಬಂದಿದ್ದಾರೆ.
Latest Videos