Video: ಅಂಬಾನಿ ಕುಟುಂಬದಲ್ಲಿ ಮದುವೆ ಮುನ್ನ ಸಂಪನ್ನಗೊಂಡ ಶಿವ ಶಕ್ತಿ ಪೂಜೆ; ವಿಡಿಯೋ ಇಲ್ಲಿದೆ ನೋಡಿ
ಮದುವೆ ಪೂರ್ವ ತಯಾರಿ ಅಂಗವಾಗಿ ಅಂಬಾನಿ ಕುಟುಂಬ ಈಗಾಗಲೇ ಶಿವ ಶಕ್ತಿಯ ಪೂಜೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಿನಿ ತಾರೆಯರು ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು. ಅದ್ಧೂರಿಯಾಗಿ ನೆರವೇರಿದ ಶಿವಶಕ್ತಿ ಪೂಜೆಯ ವಿಡಿಯೋ ಇಲ್ಲಿದೆ ನೋಡಿ.
ವಿಶ್ವದಲ್ಲೇ ಅತ್ಯಂತ ದುಬಾರಿ ಮದುವೆಗೆ ಭಾರತ ಸಾಕ್ಷಿಯಾಗುತ್ತಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಸಮಾರಂಭದ ಕಾರ್ಯ ಭರದಿಂದ ಸಾಗಿದೆ. ಇಂದಿನಿಂದ (ಜುಲೈ 12) ಮೂರು ದಿನಗಳ ವರೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಮದುವೆ ಪೂರ್ವ ತಯಾರಿ ಅಂಗವಾಗಿ ಅಂಬಾನಿ ಕುಟುಂಬ ಈಗಾಗಲೇ ಶಿವ ಶಕ್ತಿಯ ಪೂಜೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸಿನಿ ತಾರೆಯರು ಸೇರಿದಂತೆ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು. ಬೃಹತ್ ಶಿವ ಲಿಂಗಕ್ಕೆ ಮುಖೇಶ್ ಅಂಬಾನಿ ಕುಟುಂಬ ಪೂಜೆ ಸಲ್ಲಿಸಿದ್ದು, ಅದ್ಧೂರಿಯಾಗಿ ಪೂಜೆ ಸಂಪನ್ನಗೊಂಡಿದೆ. ಶಿವ ಶಕ್ತಿಯ ಆರಾಧನೆಯಿಂದ ವಧುವರರ ಮುಂದಿನ ವೈವಾಹಿಕ ಜೀವನದಲ್ಲಿ ಸಂತೋಷ ತುಂಬಿಕೊಂಡಿರುತ್ತದೆ ಎನ್ನುವ ನಂಬಿಕೆಯಿಂದಲೇ ಹಿಂದೂ ಸಂಪ್ರದಾಯದಲ್ಲಿ ಮುದುವೆಗೂ ಮೊದಲು ಈ ಪೂಜೆ ಮಾಡಿಸಲಾಗುತ್ತದೆ.
ವರದಿಗಳ ಪ್ರಕಾರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಹಾಗೂ ವಿವಾಹಪೂರ್ವ ಕಾರ್ಯಕ್ರಮಗಳ ಒಟ್ಟು ಖರ್ಚು ಈವರೆಗೆ 4000ದಿಂದ 5000 ಕೋಟಿ ರು. ಎನ್ನಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?