‘ಆಯಸ್ಸು ಜಾಸ್ತಿ ಆದಷ್ಟು ಹೆಚ್ಚು ಸಾವುಗಳನ್ನು ನೋಡಬೇಕು’; ಹಿರಿಯ ನಟ ಶ್ರೀನಾಥ್ ಬೇಸರ
ನಟಿ, ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್ನಿಂದ ನಿಧನ ಹೊಂದಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಅವರಿಗೆ 58 ವರ್ಷ ತುಂಬುತ್ತಿತ್ತು. ಅಪರ್ಣಾ ಅವರು ಹಲವು ವರ್ಷಗಳ ಕಾಲ ಬದುಕಬೇಕು ಎನ್ನುವ ಆಸೆಯನ್ನು ಹೊಂದಿದ್ದರು. ಅವರ ಸಾವಿನ ಬಗ್ಗೆ ಹಿರಿಯ ನಟ ಶ್ರೀನಾಥ್ ಮಾತನಾಡಿದ್ದಾರೆ.
ನಟ ಶ್ರೀನಾಥ್ ಅವರು ಅಪರ್ಣಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪರ್ಣಾ ಸಾವಿನ ಬಗ್ಗೆ ಶ್ರೀನಾಥ್ ಬೇಸರ ಹೊರಹಾಕಿದ್ದಾರೆ. ‘ಆಯಸ್ಸು ಜಾಸ್ತಿ ಆದಷ್ಟು ಜಾಸ್ತಿ ಸಾವುಗಳನ್ನು ನೋಡುತ್ತಿದ್ದೇವೆ. ಇವರನ್ನು ಮಗು ಆದಾಗಿನಿಂದ ನೋಡುತ್ತಿದ್ದೆ. ಅಪರ್ಣಾ ಅವರ ಎಂಥಾ ಒಳ್ಳೆಯ ಸಂಸ್ಕಾರ ಇತ್ತು’ ಎಂದು ಅವರು ಹೇಳಿದ್ದಾರೆ. ಅಪರ್ಣಾ ಅವರು ನಿರೂಪಕಿಯಾಗಿ, ನಟಿಯಾಗಿ ಗಮನ ಸೆಳೆದಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos