ಅಪರ್ಣಾರ ಯಾವತ್ತೂ ಕಳೆಗುಂದದ ಮುಖ ನೋಡಿ ನಿಮಗೆ ವಯಸ್ಸೇ ಆಗಲ್ಲ ಎನ್ನುತ್ತಿದ್ದೆ: ಅರ್ಚನಾ ಉಡುಪ

ಅಪರ್ಣಾರ ಯಾವತ್ತೂ ಕಳೆಗುಂದದ ಮುಖ ನೋಡಿ ನಿಮಗೆ ವಯಸ್ಸೇ ಆಗಲ್ಲ ಎನ್ನುತ್ತಿದ್ದೆ: ಅರ್ಚನಾ ಉಡುಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 12, 2024 | 10:44 AM

ಅಪರ್ಣಾ ಅವರೊಂದಿಗೆ ಸುಮಾರು ಎರಡು ತಿಂಗಳಿಂದ ಮಾತಾಡದಿದ್ದರೂ ಅವರ ಕೊನೆಯ ಕ್ಷಣಗಳಲ್ಲಿ ಅರ್ಚನಾ ಜೊತೆಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅರ್ಚನಾ ಅಲ್ಲೇ ಇದ್ದರು. ಅವರ ಕೊನೆಯ ದಿನಗಳಲ್ಲೂ ಮುಖದಿಂದ ಕಳೆ ಮಾಯವಾಗಿರಲಿಲ್ಲ, ನಿಮಗೆ ವಯಸ್ಸೇ ಆಗಲ್ವಾ ಅಂತ ಕೇಳುತ್ತಿದ್ದೆ ಎಂದು ಗಾಯಕಿ ಅರ್ಚನಾ ಭಾವುಕರಾಗಿ ಹೇಳುತ್ತಾರೆ.

ಬೆಂಗಳೂರು: ಅಗಲಿರುವ ಅಪರ್ಣಾ ಮತ್ತು ಖ್ಯಾತ ಗಾಯಕಿ ಅರ್ಚನಾ ಉಡುಪ ನಡುವೆ ಸ್ನೇಹ, ಬಾಂಧವ್ಯ, ಒಡನಾಟ ಎಲ್ಲವೂ ಇತ್ತು. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಅರ್ಚನಾ ತಮ್ಮ ನೆರೆಹೊರೆಯ ಗೆಳತಿಯ ಬಗ್ಗೆ ಮಾತಾಡಿದ್ದಾರೆ. ತಮ್ಮದು ಬಹಳ ವರ್ಷಗಳ ಒಡನಾಟ ಎಂದು ಹೇಳುವ ಅವರು ಮೊದಲು ಭೇಟಿಯಾಗಿದ್ದು ಯಾವಾಗ, ಸ್ನೇಹ ಚಿಗುರಿದ್ದು ಎಲ್ಲಿ ಅನ್ನೋದು ನೆನಪು ಕೂಡ ಅನ್ನುತ್ತಾರೆ. ಅರ್ಚನಾ ಮನೆ ಹತ್ತರದಲ್ಲೇ ಅಪರ್ಣಾ ಮನೆ ಕಟ್ಟಿದ್ದರಿಂದ ಮಾರ್ನಿಂಗ್ ವಾಕ್ ಗೆ ಹೋಗುವಾಗೆಲ್ಲ ಗಾಯಕಿಯು ನಿರೂಪಕಿಗೆ ಫೋನಾಯಿಸಿ ಬನ್ರೀ ವಾಕ್ ಹೋಗೋಣ ಅನ್ನುತ್ತಿದ್ದರಂತೆ. ಒಬ್ಬ ಸೆಲಿಬ್ರಿಟಿಯಾಗಿದ್ದರೂ ಅಪರ್ಣಾಗೆ ಒಂದಿಷ್ಟೂ ಜಂಭವಿರಲಿಲ್ಲ, ವೃತ್ತಿಪರ ಅಸೂಯೆ ಇರಲಿಲ್ಲ, ಅವರ ಬದುಕಿನ ಶೈಲಿ ಮತ್ತು ವೃತ್ತಿಪರತೆಯ ಬಗ್ಗೆ ಸದಾ ಅಭಿಮಾನ ಮೂಡುತಿತ್ತು ಎಂದು ಅರ್ಚನಾ ಹೇಳುತ್ತಾರೆ.

ಒಮ್ಮೆ ಅವರನ್ನು ತಮ್ಮೂರಿಗೂ ಅರ್ಚನಾ ಕರೆದುಕೊಂಡು ಹೋಗಿದ್ದರಂತೆ, ಅಲ್ಲಿನ ಪರಿಸರ, ಬೋಟಿಂಗ್ ಎಲ್ಲವನ್ನೂ ಅವರು ತುಂಬಾ ಆನಂದಿಸಿದ್ದರಂತೆ. ಒಮ್ಮೆ ಅಪರ್ಣಾ ಅವರು ತಮಗಿರುವ ವ್ಯಾಧಿಯ ಬಗ್ಗೆ ಸೂಕ್ಷ್ಮವಾಗಿ ಅರ್ಚನಾಗೆ ಹೇಳಿದ್ದರು. ಅದಕ್ಕೆ ಅರ್ಚನಾ, ನೀವು ಹೋರಾಟಗಾರ್ತಿ, ಏನೂ ಆಗಲ್ಲ, ರಿಪೋರ್ಟ್​ಗಳೆಲ್ಲ ನೆಗೆಟಿವ್ ಬರುತ್ತವೆ, ನೋಡ್ತಾ ಇರಿ ಎಂದಿದ್ದರಂತೆ. ಅದರೆ, ನ್ಯಾಯವಂತರು ಮತ್ತು ಸತ್ಯವಂತರನ್ನು ದೇವರು ಬೇಗ ಕರೆದುಕೊಂಡು ಬಿಡುತ್ತಾನೆ ಎಂದು ಅರ್ಚನಾ ವೇದನೆಯಿಂದ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    Aparna Obituary: ಕಿರುತೆರೆ ಲೋಕದಲ್ಲಿ ಹೊಸ ಛಾಪು ಮೂಡಿಸಿದ್ದ ಅಪರ್ಣಾ; ಈಡೇರಲಿಲ್ಲ ಕೊನೆಯ ಕನಸು