ಹೇಗಿತ್ತು ನೋಡಿ ಅಪರ್ಣಾ ಕೊನೆಯ ದಿನಗಳು; ಕ್ಯಾನ್ಸರ್​ ಬಂದರೂ ನಗು ನಗುತ್ತಲೇ ಇದ್ದರು

ಹೇಗಿತ್ತು ನೋಡಿ ಅಪರ್ಣಾ ಕೊನೆಯ ದಿನಗಳು; ಕ್ಯಾನ್ಸರ್​ ಬಂದರೂ ನಗು ನಗುತ್ತಲೇ ಇದ್ದರು

ರಾಜೇಶ್ ದುಗ್ಗುಮನೆ
|

Updated on: Jul 12, 2024 | 8:00 AM

ಅಪರ್ಣಾ ಹುಟ್ಟಿದ್ದು 1966ರಲ್ಲಿ. 1985ರಲ್ಲಿ ರಿಲೀಸ್ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಸಿನಿರಂಗಕ್ಕೆ ಅಪರ್ಣಾ ಕಾಲಿಟ್ಟರು. ಈ ಚಿತ್ರದಲ್ಲಿ ಅಂಬರೀಷ್ ಮೊದಲಾದವರು ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಅಪರ್ಣಾಗೆ ಜನಪ್ರಿಯತೆ ಸಿಕ್ಕಿತು. ಅವರ ಕೊನೆಯ ದಿನದ ವಿಡಿಯೋ ಇಲ್ಲಿದೆ.

ಅಪರ್ಣಾ ಅವರಿಗೆ ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಯಿತು. ಅವರು ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರು ಗುರುವಾರ (ಜುಲೈ 12) ನಿಧನ ಹೊಂದಿದ್ದಾರೆ.  ಅವರು ಕಿಮೋ ಥೆರಪಿಗಾಗಿ ಕೂದಲು ಕತ್ತರಿಸಿಕೊಂಡಿದ್ದರು. ಆಗಲೂ ಅವರು ನಗು ನಗುತ್ತಲೇ ಇದ್ದರು. ಗಾಯಕಿಯರಾದ ಸುನೀತಾ ಹಾಗೂ ಬಿಆರ್​ ಛಾಯಾ ಅಪರ್ಣಾಗೆ ಆಪ್ತರಾಗಿದ್ದರು. ಅವರ ಜೊತೆ ಕುಳಿತು ನಗು ನಗುತ್ತಾ ಮಾತನಾಡಿದ್ದು ಅಪರ್ಣಾ. ‘ಹೇಗಿದೆ ನನ್ನ ಹೊಸ ಹೇರ್​ಸ್ಟೈಲ್’ ಎಂದು ಅಪರ್ಣಾ ಕೇಳಿದ್ದರು. ಆ ಬಳಿಕ ಸುನೀತಾ ಹಾಗೂ ಛಾಯಾ ಅವರು ಅಪರ್ಣಾಗೆ ಹಾಡುಗಳನ್ನು ಹಾಡಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.