ಅಪರ್ಣಾ ಪಾರ್ಥಿವ ಶರೀರದ ಮುಂದೆನಿಂತು ಭಾವುಕರಾದ ಪತಿ; ಅಂತಿಮ ಸಂಸ್ಕಾರದ ಬಗ್ಗೆ ಮಾಹಿತಿ
ಅಪರ್ಣಾ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿತ್ತು. ಕಳೆದ ಎರಡು ವರ್ಷಗಳಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ಇದ್ದರು. ಕ್ಯಾನ್ಸರ್ ನಾಲ್ಕನೇ ಸ್ಟೇಜ್ನಲ್ಲಿ ಇತ್ತು. ಕಿಮೋ ಥೆರೆಪಿ ಕೂಡ ಮಾಡಿಸಿದ್ದರು. ಇದೆ ಅಕ್ಟೋಬರ್ಗೆ ಅಪರ್ಣಾಗೆ 58 ವರ್ಷ ಆಗುತ್ತಿತ್ತು. ಅವರ ನಿಧನದಿಂದ ಪತಿ ದುಃಖಕ್ಕೆ ಒಳಗಾಗಿದ್ದಾರೆ.
ನಿರೂಪಕಿ, ನಟಿ ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಲ್ಲ ಎನ್ನುವ ನೋವಿ ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ. ಅಪರ್ಣಾ ಅವರನ್ನು ಕಳೆದುಕೊಂಡು ಕುಟುಂಬ ಕೂಡ ದುಃಖಕ್ಕೆ ಒಳಗಾಗಿದೆ. 2005ರಲ್ಲಿ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ್ ವಸ್ತಾರೆ ಅವರನ್ನು ಅಪರ್ಣಾ ಮದುವೆ ಆದರು. ಈಗ ಪತ್ನಿಯನ್ನು ಕಳೆದುಕೊಂಡು ನಾಗರಾಜ್ ಕುಗ್ಗಿ ಹೋಗಿದ್ದಾರೆ. ‘ಮಧ್ಯಾಹ್ನ 12ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಮನೆಯ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ನಂತರ ಕುಟುಂಬದಿಂದ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ. ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos