ತುಮಕೂರು: ಚೆಂಬರ್​ನಲ್ಲಿ ಅಡಗಿ ಕುಳಿತಿದ್ದ ಬೃಹತ್ ನಾಗರಹಾವು ರಕ್ಷಣೆ

| Updated By: ಆಯೇಷಾ ಬಾನು

Updated on: Dec 13, 2023 | 9:44 AM

ತುಮಕೂರು ತಾಲೂಕಿನ ಗೂಳರವಿ ಗ್ರಾಮದ ಮನೆಯೊಂದರ ನೀರಿನ ಚೆಂಬರ್ ಒಳಗೆ ಸುಮಾರು 6 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು. ಸದ್ಯ ಉರಗ ತಜ್ಞ ಹಾವನ್ನು ರಕ್ಷಿಸಿದ್ದಾರೆ. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿ 9964519576 ಕರೆಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದ್ದಾರೆ.

ತುಮಕೂರು, ಡಿ.13: ಚೆಂಬರ್​ನಲ್ಲಿ ಬೃಹತ್ ನಾಗರಹಾವು (Cobra) ಪತ್ತೆಯಾಗಿದ್ದು ಸುರಕ್ಷಿತವಾಗಿ ರಕ್ಷಿಸಿಲಾಗಿದೆ. ತುಮಕೂರು (Tumkur) ತಾಲೂಕಿನ ಗೂಳರವಿ ಗ್ರಾಮದ ನಿವಾಸಿ ದಯಾನಂದ್ ಎಂಬುವವರ ಮನೆಯ ನೀರಿನ ಚೆಂಬರ್ ಒಳಗೆ ಸುಮಾರು 6 ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು. ಸದ್ಯ ಉರಗ ತಜ್ಞ ಹಾವನ್ನು ರಕ್ಷಿಸಿದ್ದಾರೆ.

ಬೃಹತ್ ಗಾತ್ರದ ನಾಗರಹಾವನ್ನು ಕಂಡು ಭಯಭೀತರಾಗಿದ್ದ ಮನೆಯವರು, ತಕ್ಷಣ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ಮಾಹಿತಿ ನೀಡಿದ್ದರು. ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಸ್ಥಳಕ್ಕೆ ಭೇಟಿ ನೀಡಿ ಬೃಹತ್ ಗಾತ್ರದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿ 9964519576 ಕರೆಮಾಡಬಹುದು ಎಂದು ಉರಗ ತಜ್ಞ ಮನು ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ