‘ಕಾಮಿಡಿ ಕಿಲಾಡಿಗಳು ಸೀಸನ್ 5’ ಪ್ರೋಮೋ ರಿಲೀಸ್; ಎರಡು ದೊಡ್ಡ ಬದಲಾವಣೆ
‘ಕಾಮಿಡಿ ಕಿಲಾಡಿಗಳು’ ಶೋ ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿದೆ. ಈಗ ಹೊಸ ಶೋನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರೊಮೋಸದಲ್ಲಿ ಇದನ್ನು ತಿಳಿಸಲಾಗಿದೆ ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದೆ. ಅಷ್ಟಕ್ಕೂ ಏನು ಆ ಬೇಸರ? ಆ ಬಗ್ಗೆ ಇಲ್ಲಿದೆ ವಿವರ.
‘ಕಾಮಿಡಿ ಕಿಲಾಡಿಗಳು’ ಹೊಸ ಸೀಸನ್ ಆರಂಭ ಆಗುತ್ತಿದೆ. ಇದು ಐದನೇ ಸೀಸನ್. ಅಕ್ಟೋಬರ್ 25ರಂದು ಶೋ ಆರಂಭ ಆಗಲಿದೆ. ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಶೋ ಪ್ರಸಾರ ಕಾಣಲಿದೆ. ಈ ಶೋನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ರಕ್ಷಿತಾ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಅವರ ಬದಲು ತಾರಾ ಬಂದಿದ್ದಾರೆ. ಆ್ಯಂಕರಿಂಗ್ನಲ್ಲಿ ಮಾಸ್ಟರ್ ಆನಂದ್ ಬದಲು ನಿರಂಜನ್ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.