ಚಿತ್ತಾಪುರದಲ್ಲಿ RSS ಪಥಸಂಚಲನ ದಿನವೇ ದಲಿತ ಸಂಘಟನೆ ರ್ಯಾಲಿ ಬಗ್ಗೆ ಕೇಂದ್ರ ಸಚಿವ ಜೋಶಿ ಹೇಳಿದ್ದೇನು?
RSS ಪಥಸಂಚಲನ ಹಾಗೂ ಭೀಮ ಪಥಸಂಚಲನಕ್ಕೆ ಡಿಸಿಗೆ ಪತ್ರ ಬರೆದಿರುವ ಬಗ್ಗೆ ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, ಯಾರೇ ಆದರೂ ಶಾಂತಿಯುತವಾಗಿ ಕಾರ್ಯಕ್ರಮ ಮಾಡಬಹುದು.ಭೀಮ್ ಆರ್ಮಿ ಕಾರ್ಯಕ್ರಮ ಮಾಡಿದ್ರೆ ನಮ್ಮ ತಕರಾರು ಇಲ್ಲ. ಡಾ.ಅಂಬೇಡ್ಕರ್ ಹೆಸರಿನಲ್ಲಿ ಕಾರ್ಯಕ್ರಮ ಮಾಡಿದ್ರೆ ಸ್ವಾಗತ. ಜಿಲ್ಲಾಡಳಿತ ಅನುಮತಿ ನೀಡಿದ ದಿನ ಪಥಸಂಚಲನ ನಡೆಸುತ್ತೆ. ಸಚಿವರ ಉದ್ದೇಶ ಪ್ರಚಾರ ಪಡೆಯುವುದಾಗಿದೆ. ಸಂಘಟನೆಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು ಎಂದರು.
ಹುಬ್ಬಳ್ಳಿ, (ಅಕ್ಟೋಬರ್ 22): ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ಜೋರಾಗಿದೆ. ಒಂದೆಡೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನವೆಂಬರ್ 02ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಮತ್ತೊಂದೆಡೆ ಅಂದೇ ನಮಗೂ ಪರ್ವಿಷನ್ ನೀಡುವಂತೆ ದಲಿತ ಸಂಘಟನೆ ಮನವಿ ಮಾಡಿಕೊಂಡಿದೆ. ಹೀಗಾಗಿ ಚಿತ್ತಾಪುರದಲ್ಲಿ ದಲಿತ ಸಂಘಟನೆಗಳು ವರ್ಸಸ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಬೆಳವಣಿಗೆ ಸೃಷ್ಟಿಯಾಗಿದೆ.