ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮುಂದುವರೀಲಿಲ್ಲ: ವಾಣಿಜ್ಯ ಕಾರ್ಯದರ್ಶಿ

Updated on: Jan 09, 2026 | 10:34 AM

ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್​ ಲುಟ್ನಿಕ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್​ ಟ್ರಂಪ್​ಗೆ ಕರೆ ಮಾಡದ ಕಾರಣ ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು, ಹೊವಾರ್ಡ್ ಲುಟ್ನಿಕ್ ಮಾತನಾಡಿ, ತಾವು ಸ್ವತಃ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿರುವ ಅವರು, ಒಂದು ತೀರ್ಮಾನಕ್ಕೆ ಬರಲು, ಮೋದಿ ಟ್ರಂಪ್‌ಗೆ ಕರೆ ಮಾಡುವುದು ಅಗತ್ಯವಾಗಿತ್ತು , ಭಾರತ ಈ ಒಪ್ಪಂದದಿಂದ ತೃಪ್ತರಾಗಿರಲಿಲ್ಲ ಮತ್ತು ಮೋದಿ ಕರೆ ಮಾಡಲಿಲ್ಲ.

ವಾಷಿಂಗ್ಟನ್, ಜನವರಿ 09: ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್​ ಲುಟ್ನಿಕ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್​ ಟ್ರಂಪ್​ಗೆ ಕರೆ ಮಾಡದ ಕಾರಣ ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು, ಹೊವಾರ್ಡ್ ಲುಟ್ನಿಕ್ ಮಾತನಾಡಿ, ತಾವು ಸ್ವತಃ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿರುವ ಅವರು, ಒಂದು ತೀರ್ಮಾನಕ್ಕೆ ಬರಲು, ಮೋದಿ ಟ್ರಂಪ್‌ಗೆ ಕರೆ ಮಾಡುವುದು ಅಗತ್ಯವಾಗಿತ್ತು , ಭಾರತ ಈ ಒಪ್ಪಂದದಿಂದ ತೃಪ್ತರಾಗಿರಲಿಲ್ಲ ಮತ್ತು ಮೋದಿ ಕರೆ ಮಾಡಲಿಲ್ಲ.

ಈ ಕಾರಣದಿಂದಾಗಿ, ಈ ಒಪ್ಪಂದವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದೆ ಎಂದಿದ್ದಾರೆ. ಭಾರತದೊಂದಿಗೆ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅವರು ಹೇಳಿದ್ದಾರೆ.ನಾವು ಇನ್ನು ಮುಂದೆ ಅದನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 09, 2026 10:32 AM