ಬಿಬಿಎಮ್​ಪಿಯಲ್ಲೂ ಬಿಲ್ ಪಾಸು ಮಾಡಿಸಿಕೊಳ್ಳಲು ಗುತ್ತಿಗೆದಾರರು ಶೇಕಡ 50 ರಷ್ಟು ಕಮೀಶನ್ ನೀಡುತ್ತಿದ್ದಾರಂತೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2022 | 6:36 PM

ಕಳೆದ 22 ತಿಂಗಳುಗಳಿಂದ ಗುತ್ತಿಗೆದಾರರ ಬಿಲ್ ಪಾಸಾಗಿಲ್ಲ, ಆಯಕ್ತರು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಗುತ್ತಿಗೆದಾರರ ಸಂಘ ಹೇಳಿದೆ.

Bengaluru: ಕಮೀಶನ್ ದಂಧೆಯ ಆರೋಪಗಳು ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಯ (BBMP) ಹೆಬ್ಬಾಲಿಗೆ ಬಂದು ನಿಂತಿವೆ. ಪಾಲಿಕೆ ಕಾಮಗಾರಿಗಳನ್ನು ಮಾಡಿಕೊಡುವ ಗುತ್ತಿಗೆದಾರರು ಬಿಲ್ ಗಳನ್ನು ಪಾಸು ಮಾಡಿಸಿಕೊಳ್ಳಬೇಕಾದರೆ ಶೇಕಡ 40 ರಿಂದ 50 ರಷ್ಟು ಕಮೀಶನ್ ನೀಡಬೇಕಾಗುತ್ತಿದೆ ಎಂದು ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕಳೆದ 22 ತಿಂಗಳುಗಳಿಂದ ಗುತ್ತಿಗೆದಾರರ ಬಿಲ್ ಪಾಸಾಗಿಲ್ಲ, ಆಯಕ್ತರು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಗುತ್ತಿಗೆದಾರರ ಸಂಘ ಹೇಳಿದೆ.