Loading video

ಪ್ರಯಾಣಿಕರನ್ನ ಕರೆದೊಯ್ಯಲು ಪೈಪೋಟಿ: ಖಾಸಗಿ ಬಸ್ ಕ್ಲೀನರ್​​ನ ಕೂಡಿಹಾಕಿದ KSRTC ಸಿಬ್ಬಂದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 26, 2025 | 6:45 PM

ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಈಶಾ ಫೌಂಡೇಶನ್‌ಗೆ ಭಕ್ತರ ದೊಡ್ಡ ದಂಡು ಆಗಮಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಹೌಸ್‌ಫುಲ್ ಆಗಿದ್ದು, 100 ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನಿಂದಲೂ ನೇರ ಬಸ್‌ಗಳನ್ನು ಏರ್ಪಡಿಸಲಾಗಿದೆ. ಭಕ್ತರನ್ನು ನಿಭಾಯಿಸಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ. ಈಶಾ ಫೌಂಡೇಶನ್‌ನಲ್ಲಿ ಆದಿಯೋಗಿ ದರ್ಶನ ಪಡೆಯಲು ಭಕ್ತರು ಉತ್ಸುಕರಾಗಿದ್ದಾರೆ.

ಚಿಕ್ಕಬಳ್ಳಾಪುರ, ಫೆಬ್ರವರಿ 26: ಮಹಾ ಶಿವರಾತ್ರಿ ಹಿನ್ನೆಲೆ ಇಂದು ಈಶಾ ಫೌಂಡೇಶನ್​ಗೆ (Isha Foundation) ತೆರಳುವ ಬಸ್​ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಖಾಸಗಿ ಬಸ್ ಕ್ಲೀನರ್​ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಂದು  ಪ್ರಯಾಣಿಕರನ್ನ ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಬಸ್ ಕ್ಲೀನರ್​ನನು ವಶಕ್ಕೆ ಪಡೆದ ಕೆಎಸ್​​ಆರ್​​ಟಿಸಿ ಬಸ್ ನಿಲ್ದಾಣದ ಭದ್ರತಾ ಸಿಬ್ಬಂದಿ ಕೊಠಡಿಯಲ್ಲಿ ಕೂಡಿಹಾಕಿದ್ದರು. ಈ ನಡುವೆ ಇಬ್ಬರ ಮಧ್ಯೆ ಜಟಾಪಟಿ ನಡೆದಿದೆ. ಬಳಿಕ ಕ್ಲೀನರ್ ಕೊಠಡಿಯಿಂದ ಪರಾರಿಯಾಗಿದ್ದಾರೆ. ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.