ಚಿಕ್ಕಪೇಟೆಯಲ್ಲಿ ತಪ್ಪಿದ ಭಾರಿ ದುರಂತ: ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್; ಹಲವು ಬೈಕ್‌ಗಳು ಜಖಂ
ಬೆಂಗಳೂರಿನ ಚಿಕ್ಕಪೇಟೆಯ ಪಿ.ಎಸ್. ಲೇನ್ ರಸ್ತೆಯಲ್ಲಿ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಸುಮಾರು ನಾಲ್ಕೈದು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋಡೆ ಕುಸಿತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ನಂತರ ನಡೆದಿರುವ ಮತ್ತೊಂದು ಗೋಡೆ ಕುಸಿತ ಇದಾಗಿದೆ.
ಬೆಂಗಳೂರು, ಅಕ್ಟೋಬರ್ 26: ನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ನಂತರ ಮತ್ತೊಂದು ಗೋಡೆ ಕುಸಿತದ ಘಟನೆ ವರದಿಯಾಗಿದೆ. ಚಿಕ್ಕಪೇಟೆಯ ಪಿ.ಎಸ್. ಲೇನ್ ರಸ್ತೆಯಲ್ಲಿ ಕಾಂಪೌಂಡ್ ಗೋಡೆಯೊಂದು ಅನಿರೀಕ್ಷಿತವಾಗಿ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ರಸ್ತೆಯ ಪಕ್ಕದಲ್ಲಿ ಸಾಲಾಗಿ ನಿಲ್ಲಿಸಿದ್ದ ಸುಮಾರು ನಾಲ್ಕೈದು ದ್ವಿಚಕ್ರ ವಾಹನಗಳು ಹಾನಿಗೊಳಗಾಗಿವೆ. ಗೋಡೆ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಗೋಡೆಯು ಶಿಥಿಲಗೊಂಡಿತ್ತೇ ಅಥವಾ ಇನ್ಯಾವುದಾದರೂ ಕಾರಣದಿಂದ ಕುಸಿದಿದೆಯೇ ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 26, 2026 06:02 PM
Loading...
Unable to load recommendations.
Follow Us
