Siddeshwara Swamiji: ಸಿದ್ದೇಶ್ವರ ಶ್ರೀ ನಿಧನಕ್ಕೆ ಹೊಳೆ ಆಲೂರಿನಲ್ಲಿ ಅಂಧ, ಬುದ್ಧಿಮಾಂದ್ಯ ಮಕ್ಕಳಿಂದ ಸಂತಾಪ

| Updated By: ಆಯೇಷಾ ಬಾನು

Updated on: Jan 03, 2023 | 10:00 AM

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತರಾಗಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಅಂಧ, ಬುದ್ಧಿಮಾಂದ್ಯ ಮಕ್ಕಳು ಸಂತಾಪ ಸೂಚಿಸಿದ್ದಾರೆ.

ವಿಜಯಪುರ: ಮಾತು ಆಡಿದರೆ ಮುತ್ತಿನಂತೆ. ಪ್ರತಿಯೊಂದು ನುಡಿಗಳು ಸುಂದರ ಬದುಕಿಗೆ ದಾರಿದೀಪದಂತೆ. ಪ್ರತಿಯೊಂದು ಭಾಷಣವೂ ಆದರ್ಶಪೂರ್ಣ. ಪ್ರತಿಯೊಂದು ಪ್ರವಚನವೂ ಪರಿವರ್ತನೆಯ ಕಿರಣ. ಇವರ ತತ್ವನುಡಿಗಳನ್ನು ಕೇಳಿ ಅದೆಷ್ಟು ಮಂದಿಯ ಮನಪರಿವರ್ತನೆಯಾಗಿದೆಯೋ. ಇವರ ಪ್ರಚವನಗಳನ್ನು ಆಲಿಸಿ ಅದೆಷ್ಟು ಮಂದಿ ಸನ್ಮಾರ್ಗದ ಹಾದಿ ಹಿಡಿದಿದ್ದಾರೋ. ಹೌದು ಶತಮಾನಂದ ಸಂತ ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ಎಲ್ಲರಿಗೂ ಆದರ್ಶಪ್ರಾಯ. ಜೀವನದುದ್ದಕ್ಕೂ ಆಡಂಬರವಿಲ್ಲದೇ, ಅಹಂ ಇಲ್ಲದ.. ಸಹಾನುಭೂತಿ.. ಸತ್ಯ ಶುದ್ಧಿಯೊಂದಿಗೆ ಅತ್ಯಂತ ಸರಳವಾಗಿ ಜೀವಿಸಿದವರು ಸಿದ್ದೇಶ್ವರರು.

ಸಿದ್ದೇಶ್ವರ ಶ್ರೀಗಳು ತಮ್ಮ ಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮೀಸಲಿಟ್ಟವರು. ಅವರು ಜೀವನದುದ್ದಕ್ಕೂ ನಡೆದುಬಂದ ಹಾದಿಯೇ ವಿಭಿನ್ನ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತರಾಗಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಅಂಧ, ಬುದ್ಧಿಮಾಂದ್ಯ ಮಕ್ಕಳು ಸಂತಾಪ ಸೂಚಿಸಿದ್ದಾರೆ. ಮಕ್ಕಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಮೌನಾಚರಣೆ ಮೂಲಕ ಅಂತಿಮನಮನ ಸಲ್ಲಿಸಿದ್ದಾರೆ. ಅಲ್ಲದೆ ಅಂತಿಮ ದರ್ಶನದಲ್ಲಿ ಭಾಗಿಯಾಗಲು 70ಕ್ಕೂ ಹೆಚ್ಚು ಅಂಧ, ಬುದ್ಧಿಮಾಂದ್ಯ ಮಕ್ಕಳು ವಿಜಯಪುರಕ್ಕೆ ಹೊರಟಿದ್ದಾರೆ.

Published on: Jan 03, 2023 10:00 AM