Pravin Nettaru wife’s job; ಕಾಂಗ್ರೆಸ್ ನಿಜಬಣ್ಣ ಪ್ರದರ್ಶಿಸಲಾರಂಭಿಸಿದೆ, ನೆಟ್ಟಾರು ಕುಟುಂಬವನ್ನು ನಾವು ನೋಡಿಕೊಳ್ಳುತ್ತೇವೆ: ಯಶಪಾಲ್ ಸುವರ್ಣ, ಉಡುಪಿ ಶಾಸಕ
ಕಾಂಗ್ರೆಸ್ ಸರ್ಕಾರ ನೌಕರ ಕಸಿದುಕೊಂಡರೇನಂತೆ, ಅವರ ಕುಟುಂಬವನ್ನು ನಾವು ಪೋಷಿಸುತ್ತೇವೆ ಎಂದು ಸುವರ್ಣ ಹೇಳಿದರು.
ಉಡುಪಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು (Pravin Nettaru) ಅವರ ಪತ್ನಿ ನೂತನ ಕುಮಾರಿಗೆ (Nutan Kumari) ಹಿಂದಿನ ಸರ್ಕಾರ ಒಂದು ಸೂಕ್ತವಾದ ನೌಕರಿ ನೀಡದೆ ಕಣ್ಣೊರೆಸುವ ಭಾಗವಾಗಿ ತಾತ್ಕಾಲಿಕ ಹುದ್ದೆ ನೀಡಿ ಕೈತೊಳೆದುಕೊಂಡಿದೆ, ಎಂದು ಕಾಂಗ್ರೆಸ್ ಅರೋಪಿಸುತ್ತಿದ್ದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ನೆಟ್ಟಾರು ಪತ್ನಿಯನ್ನು ಕೆಲಸದಿಂದ ವಜಾ ಮಾಡಿ ತನ್ನ ನಿಜಬಣ್ಣ ಪ್ರದರ್ಶಿಸಿದೆ ಎಂದು ಬಿಜೆಪಿಯ ಉಡುಪಿ ಶಾಸಕ ಯಶಪಾಲ್ ಸುವರ್ಣ (Yashpal Suvarna) ಹೇಳುತ್ತಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸುವರ್ಣ, ನೂತನ್ ಕುಮಾರಿ ಮತ್ತು ಅವರ ಕುಟುಂಬಕ್ಕೆ ಅನ್ಯಾಯವಾಗದಂತೆ ನಾವು ನೋಡಿಕೊಳ್ಳುತ್ತೇವೆ, ಕಾಂಗ್ರೆಸ್ ಸರ್ಕಾರ ನೌಕರ ಕಸಿದುಕೊಂಡರೇನಂತೆ, ಅವರ ಕುಟುಂಬವನ್ನು ನಾವು ಪೋಷಿಸುತ್ತೇವೆ ಎಂದು ಸುವರ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ