Madhu Bangarappa: ಮಿನಿಸ್ಟ್ರಾಗುವ ಮೊದಲು ಮುನಿಸಿಕೊಂಡಿದ್ದ ಮಧು ಮಿನಿಸ್ಟ್ರಾದ ಮೇಲೆ ಮುಖ್ಯಮಂತ್ರಿಗಳ ಮನೆಯನ್ನು ಮುಗುಳ್ನಗುತ್ತಾ ಮುಟ್ಟಿದರು!

Madhu Bangarappa: ಮಿನಿಸ್ಟ್ರಾಗುವ ಮೊದಲು ಮುನಿಸಿಕೊಂಡಿದ್ದ ಮಧು ಮಿನಿಸ್ಟ್ರಾದ ಮೇಲೆ ಮುಖ್ಯಮಂತ್ರಿಗಳ ಮನೆಯನ್ನು ಮುಗುಳ್ನಗುತ್ತಾ ಮುಟ್ಟಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2023 | 7:18 PM

ರಾಜ್ಯ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ, ಮಧು ಅವರ ಭಾವ ಶಿವರಾಜಕುಮಾರ್ ಮನೆಗೆ ತೆರಳಿ ಪರಿಸ್ಥಿತಿಯನ್ನು ವಿವರಿಸಬೇಕಾಯಿತು.

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮೊದಲ ಹಂತದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಜೊತೆ 8 ಸಚಿವರ ಹೆಸರು ಅಂತಿಮಗೊಳಿಸಿದಾಗ ಸೊರಬ ಶಾಸಕ ಮಧು ಬಂಗಾರಪ್ಪ (Madhu Bangarappa) ರಂಪಾಟ ಮಾಡಿದ್ದರು. ಆ 8 ಸಚಿವರು ದಶಕಗಳಿಂದ ಪಕ್ಷಕ್ಕಾಗಿ ದುಡಿದವರು ಎಂಬ ಅಂಶದ ಅರಿವು ಕೂಡ ಇಲ್ಲದೆ ಆ ಪಟ್ಟಿಯಲ್ಲಿ ನನ್ನ ಹೆಸರು ಯಾಕಿಲ್ಲ ಅಂತ ದುರ್ದಾನ ತೆಗೆದುಕೊಂಡಂತೆ ಆಡಿ ಅಪ್ರಬುದ್ಧತೆ (immaturity) ಮತ್ತು ರಾಜಕೀಯ ಅಪಕ್ವತೆಯನ್ನು ಪ್ರದರ್ಶಿಸಿದ್ದರು. ರಾಜ್ಯ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ (Randeep Surjewala) ಅವರು ಮಧು ಅವರ ಭಾವ ಶಿವರಾಜಕುಮಾರ್ ಮನೆಗೆ ತೆರಳಿ ಪರಿಸ್ಥಿತಿಯನ್ನು ವಿವರಿಸಬೇಕಾಯಿತು. ಇವತ್ತು ಮಧು ಬಂಗಾರಪ್ಪ ಮಿನಿಸ್ಟ್ರಾಗಿದ್ದಾರೆ. ಕೋಪ-ತಾಪ-ಅಸಮಾಧಾನ ಎಲ್ಲ ಶಮನಗೊಂಡಿವೆ. ಮಧ್ಯಾಹ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಮುಗುಳ್ನಗುತ್ತಾ ಅವಸರದಲ್ಲಿ ಬರುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ