ಬೆಳಗಾವಿಯಲ್ಲಿ ವೈಭವೋಪೇತವಾಗಿ ಜರುಗಿದ ಛತ್ರಪತಿ ಶಿವಾಜಿ ಮಹರಾಜರ ಜಯಂತಿ
ಕುಂದಾನಗರಿ ಬೆಳಗಾವಿಯಲ್ಲಿ ವೈಭವೋಪೇತವಾಗಿ ಛತ್ರಪತಿ ಶಿವಾಜಿ ಮಹರಾಜರ ಜಯಂತಿ ನಡೆಯಿತು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದ ವಿವಿಧ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿತು.
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi) ವೈಭವೋಪೇತವಾಗಿ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaja) ಜಯಂತಿ ನಡೆಯಿತು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದ ವಿವಿಧ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿತು. ಮಧ್ಯರಾತ್ರಿ 2 ಗಂಟೆವರೆಗು ಸಹಸ್ರಾರು ಜನ ಮೆರವಣಿಗೆ ವೀಕ್ಷಿಸಿದರು. ಬೆಳಗಾವಿಯ ನರಗುಂದಕರ ಭಾವೆ ಚೌಕ್‌ನಿಂದ ಸಾಗಿದ ಭವ್ಯ ಮೆರವಣಿಗೆ, ಮಾರುತಿ ಬೀದಿ, ಕಿರ್ಲೋಸ್ಕರ್ ರಸ್ತೆ, ರಾಮದೇವ ಬೀದಿ, ಸಮಾದೇವಿ ಬೀದಿ, ಕಾಲೇಜು ರಸ್ತೆ, ಛತ್ರಪತಿ ಸಂಭಾಜಿ ಮಹಾರಾಜ ವೃತ್ತದ ಮಾರ್ಗವಾಗಿ ಕಪಿಲೇಶ್ವರ ದೇವಸ್ಥಾನವರೆಗೆ ನಡೆಯಿತು. ಇಂದು (ಮೇ28) ಬೆಳಗ್ಗೆ 6 ಗಂಟೆಯವರೆಗೆ ಮೆರವಣಿಗೆ ಸಾಗಿತು. ಛತ್ರಪತಿ ಶಿವಾಜಿ ಮಹಾರಾಜರ ಗತವೈಭವ ಸಾರುವ ರೂಪಕಗಳು, 300ಕ್ಕೂ ಅಧಿಕ ಕಲಾತಂಡಗಳು ನೋಡುಗರನ್ನು ಆಕರ್ಷಿಸಿದವು.
Latest Videos