ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಹತ್ತಿಕ್ಕುವ ಮತ್ತು ಸೆಳೆಯುವ ಪ್ರಯತ್ನ ಮಾಡುತ್ತಿದೆ: ಎಸ್ ಮುನಿಸ್ವಾಮಿ, ಸಂಸದ

|

Updated on: Oct 11, 2023 | 1:19 PM

ಅನುದಾನ ಹಿಂಪಡೆಯದಂತೆ ಶಿವಕುಮಾರ್ ಅವರ ಕಾಲು ಹಿಡಿಯುತ್ತೇನೆ ಅಂತ ಮುನಿರತ್ನ ಹೇಳಿರುವುದು ಅವರೆಷ್ಟು ನೊಂದಿದ್ದಾರೆ, ಹತಾಶರಾಗಿದ್ದಾರೆ ಅನ್ನೋದನ್ನು ಸೂಚಿಸುತ್ತದೆ ಅಂತ ಮುನಿಸ್ವಾಮಿ ಹೇಳಿದರು. ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಸುರೇಶ್ ಅನುದಾನವನ್ನು ವಾಪಸ್ಸು ತರಲು ಪ್ರಯತ್ನಿಸಬೇಕು ಎಂದು ಮುನಿಸ್ವಾಮಿ ಹೇಳಿದರು.

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರದ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಹಿಂಪಡೆದಿರುವುದನ್ನು ವಿರೋಧಿಸಿ ವಿಧಾನ ಸೌಧದ ಗಾಂಧಿ ಪ್ರತಿಮೆ ಕೂತು ಪ್ರತಿಭಟನೆ ನಡೆಸುತ್ತಿರುವ ಅಲ್ಲಿನ ಶಾಸಕ ಮುನಿರತ್ನ ನಾಯ್ಡು (Munirathna Naidu) ಅವರ ಬೆಂಬಲಕ್ಕೆ ಆಗಮಿಸಿದ ಕೋಲಾರ ಸಂಸದ ಎಸ್ ಮುನಿಸ್ವಾಮಿ (S Muniswamy) ಬಿಡುಗಡೆ ಆಗಿದ್ದ ಅನುದಾನವನ್ನು ಇತ್ತೀಚಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿದೆ ಎಂದು ಆರೋಪಿಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಶಿವಕುಮಾರ್ ಅವರು ಮುನಿರತ್ನ ಕೈಗೆತ್ತಿಕೊಂಡಿರುವ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು, ಆದರೆ ಅವರು ಹಾಗೆ ಮಾಡದೆ ಬಿಜೆಪಿ ಶಾಸಕರನ್ನು ಹತ್ತಿಕ್ಕುವ ಮತ್ತು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಹೇಳಿದರು. ಅನುದಾನ ಹಿಂಪಡೆಯದಂತೆ ಶಿವಕುಮಾರ್ ಅವರ ಕಾಲು ಹಿಡಿಯುತ್ತೇನೆ ಅಂತ ಮುನಿರತ್ನ ಹೇಳಿರುವುದು ಅವರೆಷ್ಟು ನೊಂದಿದ್ದಾರೆ, ಹತಾಶರಾಗಿದ್ದಾರೆ ಅನ್ನೋದನ್ನು ಸೂಚಿಸುತ್ತದೆ ಅಂತ ಮುನಿಸ್ವಾಮಿ ಹೇಳಿದರು. ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಸುರೇಶ್ ಅನುದಾನವನ್ನು ವಾಪಸ್ಸು ತರಲು ಪ್ರಯತ್ನಿಸಬೇಕು ಎಂದು ಮುನಿಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ