ಶಿವಕುಮಾರ ಹಾಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಜಿಗಿದರು!
ಶುಕ್ರವಾರ ನವದೆಹಲಿಯಲ್ಲಿ ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದಾಗ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಬ್ಯಾರಿಕೇಡ್ ಜಂಪ್ ಮಾಡಿದರು.
ನವದೆಹಲಿ: ಪ್ರತಿಭಟನೆ ಮಾಡುವಾಗ ಬ್ಯಾರಿಕೇಡ್ ಗಳನ್ನು ಹತ್ತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ಕಾಂಗ್ರೆಸ್ ನಾಯಕರ ಶೈಲಿ ಅಂತ ಕಾಣುತ್ತದೆ. ಹಿಂದೆ ಪ್ರತಿಭಟನೆಯೊಂದರಲ್ಲಿ ಅದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾಡಿದ್ದರು. ಶುಕ್ರವಾರ ನವದೆಹಲಿಯಲ್ಲಿ ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದಾಗ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಬ್ಯಾರಿಕೇಡ್ ಜಂಪ್ ಮಾಡಿದರು.