Karnataka Budget Session: ಸದಸ್ಯರು ಸಮಯಕ್ಕೆ ಸರಿಯಾಗಿ ಬರಲು ವಿಧಾನ ಸೌಧದಲ್ಲಿ ತಿಂಡಿ ವ್ಯವಸ್ಥೆ ಮಾಡಿಸಿದ ಸ್ಪೀಕರ್ ಗೆ ಧನ್ಯವಾದ ಸಲ್ಲಿಸಿದ ರಂಗನಾಥ್
Karnataka Budget Session: ಸದನದಲ್ಲಿ ಸ್ಪೀಕರ್ ಅವರು ಜಾರಿಗೆ ತರುತ್ತಿರುವ ಸುಧಾರಣೆಗಳ ಬಗ್ಗೆ ಪ್ರಶಂಸಿಸುತ್ತಾ, ಶಾಸಕರೆಲ್ಲ ಸಮಯಕ್ಕೆ ಸರಿಯಾಗಿ ಸದನಕ್ಕೆ ಬರಲು ತಿಂಡಿಯ ವ್ಯವಸ್ಥೆ ಮಾಡಿದ್ದನ್ನು ಮತ್ತು ಸದನದ ಕಾರ್ಯದರ್ಶಿ ಮೂಲಕ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದನ್ನು ರಂಗನಾಥ್ ಶ್ಲಾಘಿಸುತ್ತಾರೆ. ಅವರ ಅಭಿನಂದನೆಗೆ ಮುಗುಳ್ನುಗುವ ಸ್ಪೀಕರ್ ಖಾದರ್, ಅದೆಲ್ಲ ಸರಿ, ನೀವೆಲ್ಲ ಸಮಯ ಕಾಪಾಡಿಕೊಂಡರೆ ಸಾಕು ಅನ್ನುತ್ತಾರೆ!
ಬೆಂಗಳೂರು: ವಿಧಾನಸಭಾ ಸ್ಪೀಕರ್ ಯುಟಿ ಖಾದರ್ (UT Khader) ಶಿಸ್ತಿನ ಸಿಪಾಯಿ ಅಂತ ಅವರು ಸದನದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಮೊದಲಿಂದಲೂ ಎಲ್ಲರಿಗೆ ಗೊತ್ತಿರುವ ವಿಚಾರ. ಇವತ್ತು ಸದನದ ಕಾರ್ಯಕಲಾಪಗಳು ಶುರುವಾದ ಬಳಿಕ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ ರಂಗನಾಥ್ (Dr Ranganath) ಈ ವಿಷಯವನ್ನು ಸದಸ್ಯರ ಗಮನಕ್ಕೆ ತರುತ್ತಾ ಸಭಾಧ್ಯಕ್ಷರನ್ನು ಅಭಿನಂದಿಸುತ್ತಾರೆ. ಅಸಲಿಗೆ ಅವರಿಗೆ ಕುಣಿಗಲ್ ವ್ಯಾಪ್ತಿಯಲ್ಲಿ ಬರುವ ವಸತಿಶಾಲೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ (Social Welfare minister) ಪ್ರಶ್ನೆಯೊಂದನ್ನು ಕೇಳಲು ಎದ್ದುನಿಲ್ಲುತ್ತಾರೆ. ಅವರ ಪ್ರಶ್ನೆಗೆ ಉತ್ತರ ಒದಗಿಸಲಾಗಿದೆಯೆಂದು ಸಚಿವರು ಹೇಳುತ್ತಾರೆ. ಆಗಲೇ ವಿಷಯಾಂತರವಾಗುತ್ತದೆ. ರಂಗನಾಥ್, ಸದನದಲ್ಲಿ ಸ್ಪೀಕರ್ ಅವರು ಜಾರಿಗೆ ತರುತ್ತಿರುವ ಸುಧಾರಣೆಗಳ ಬಗ್ಗೆ ಪ್ರಶಂಸಿಸುತ್ತಾ, ಶಾಸಕರೆಲ್ಲ ಸಮಯಕ್ಕೆ ಸರಿಯಾಗಿ ಸದನಕ್ಕೆ ಬರಲು ತಿಂಡಿಯ ವ್ಯವಸ್ಥೆ ಮಾಡಿದ್ದನ್ನು ಮತ್ತು ಸದನದ ಕಾರ್ಯದರ್ಶಿ ಮೂಲಕ ವಸ್ತ್ರ ಸಂಹಿತೆ ಜಾರಿಗೊಳಿಸಿದ್ದನ್ನು ಶ್ಲಾಘಿಸುತ್ತಾರೆ. ಅವರ ಅಭಿನಂದನೆಗೆ ಮುಗುಳ್ನುಗುವ ಸ್ಪೀಕರ್ ಖಾದರ್, ಅದೆಲ್ಲ ಸರಿ, ನೀವೆಲ್ಲ ಸಮಯ ಕಾಪಾಡಿಕೊಂಡರೆ ಸಾಕು ಅನ್ನುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ