MLA Vs MP: ಕೋಲಾರದ ಸಂಸದ ಒಬ್ಬ ರೌಡಿಶೀಟರ್ ಅಂತ ದಾಖಲೆ ತೋರಿಸಿದರು ಶಾಸಕ ಪ್ರದೀಪ್ ಈಶ್ವರ್
ರಾಜ್ಯದ ಸಂಸದರು ಇಲ್ಲಿನ ಬಡವರ ಬಗ್ಗೆ ಕಾಳಜಿ ತೋರುವ ಬದಲು ಅಕ್ಕಿಗಾಗಿ ಕೀಳುಮಟ್ಟದ ರಾಜಕಾರಣ ಮಾಡುತ್ತಿರರೋದು ವಿಷಾದನೀಯ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಬೆಂಗಳೂರು: ಕೋಲಾರ ಸಂಸದ ಎಸ್ ಮುನಿಸ್ವಾಮಿ (S Muniswamy) ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ನಡುವೆ ಮಾತಿನ ಕಾಳಗ ಜಾರಿಯಲ್ಲಿದೆ. ನಿನ್ನೆ ಪ್ರದೀಪ್ ಸಂಸದ ಪ್ರತಾಪ್ ಸಿಂಹ (Pratap Simha) ಬಗ್ಗೆ ಕಾಮೆಂಟ್ ಮಾಡಿದ ಬಳಿಕ ಮುನಿಸ್ವಾಮಿ ಶಾಸಕನ ಮೇಲೆ ಹರಿಹಾಯುತ್ತಿದ್ದಾರೆ. ಪ್ರದೀಪ್ ಹುಚ್ಚ ವೆಂಕಟ್-2 ಎಂದು ಮುನಿಸ್ವಾಮಿ ಹೇಳಿದಕ್ಕೆ ಪ್ರತಿಯಾಗಿ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಚಿಕ್ಕಬಳ್ಳಾಪುರ ಶಾಸಕ, ಸಂಸದರನ್ನು ಮೆಂಟಲ್ ‘ಮನಿ’ಸ್ವಾಮಿ ಎಂದು ಕರೆದರಲ್ಲದೆ ಅವರೊಬ್ಬ ರೌಡಿ ಶೀಟರ್ ಅಂತ ದಾಖಲೆ ತೋರಿಸಿದರು. ಬಿಜೆಪಿ ನಾಯಕರು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತಾಡುವುದನ್ನು ಬಿಟ್ಟು ವೈಯಕ್ತಿಕ ದಾಳಿ ನಡೆಸಲು ಮುಂದಾಗುತ್ತಾರೆ, ಆದರೆ ಅವರ ಬಾಯಿ ಚಪಲದ ಮಾತುಗಳಿಗೆ ಕಾಂಗ್ರೆಸ್ ನಾಯಕರು ಹೆದರಲ್ಲ, ಅವರು ಒಂದು ಹೆಜ್ಜೆ ಮುಂದೆ ಹೋದರೆ ನಾವು 4 ಹೆಜ್ಜೆ ಮುಂದೆ ಹೋಗುತ್ತೇವೆ ಅಂತ ಪ್ರದೀಪ್ ಹೇಳಿದರು. ಭಾರತೀಯ ಆಹಾರ ನಿಗಮದಲ್ಲಿ ಬೇಕಾದಷ್ಟು ಅಕ್ಕಿ ದಾಸ್ತಾನಿದೆ ಇರೋದನ್ನು ದಾಖಲೆ ಸಮೇತ ಸಾಬೀತು ಮಾಡುವುದಾಗಿ ಪ್ರದೀಪ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ