Karnataka Budget Session: ಈಶ್ವರಪ್ಪ ರಾಜ್ಯದ ಹಿರಿಯ ನಾಯಕ, ಅಗೌರವ ಸೂಚಿಸುವ ಪದಗಳನ್ನು ಪ್ರದೀಪ್ ಈಶ್ವರ್ ಬಳಸಬಾರದು

|

Updated on: Feb 12, 2024 | 1:01 PM

Karnataka Budget Session: ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ವಿಷಯದಲ್ಲಿ ಮಾತಾಡುವಾಗ ಅವರು ಭಾಷೆಯ ಮೇಲೆ ಹಿಡಿತ ಸಾಧಿಸಲಾಗದೆ, ಬಾಯಿ ಮುಚ್ಚಿಕೊಂಡಿರಲಿ, ತೆಪ್ಪಗಿರಲಿ ಅಂತ ಹೇಳಿದ್ದು ಸರಿಯೆನಿಸಲಿಲ್ಲ. ಕನ್ನಡ ಭಾಷೆಯ ಪದಭಂಡಾರ ಅಗಾಧವಾದದ್ದು, ಟೀಕೆ ಮಾಡಲು ಸಹ್ಯವೆನಿಸಿಸುವ ಹಲವಾರು ಪದಗಳಿವೆ, ಅವುಗಳನ್ನು ಬಳಸಬಹುದಾಗಿತ್ತು.

ಬೆಂಗಳೂರು: ಇಂದಿನಿಂದ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ವಿಧಾನ ಸೌಧಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮಾಧ್ಯಮಗಳೊಂದಿಗೆ ಮಾತಾಡುವಾಗ ತಮ್ಮ ನಾಯಕರನ್ನು ಹೊಗಳುವ ಭರದಲ್ಲಿ ಬಿಜೆಪಿ ನಾಯಕರನ್ನು ತೆಗಳಿದರು. ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ವಿಷಯದಲ್ಲಿ ಮಾತಾಡುವಾಗ ಅವರು ಭಾಷೆಯ ಮೇಲೆ ಹಿಡಿತ ಸಾಧಿಸಲಾಗದೆ, ಬಾಯಿ ಮುಚ್ಚಿಕೊಂಡಿರಲಿ, ತೆಪ್ಪಗಿರಲಿ ಅಂತ ಹೇಳಿದ್ದು ಸರಿಯೆನಿಸಲಿಲ್ಲ. ಕನ್ನಡ ಭಾಷೆಯ ಪದಭಂಡಾರ ಅಗಾಧವಾದದ್ದು, ಟೀಕೆ ಮಾಡಲು ಸಹ್ಯವೆನಿಸಿಸುವ ಹಲವಾರು ಪದಗಳಿವೆ, ಅವುಗಳನ್ನು ಬಳಸಬಹುದಾಗಿತ್ತು. ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ನಾಯಕರನ್ನು ಹೆದರಿಸಲು ಆದಾಯ ತೆರಿಗೆ ಇಲಾಖೆ (Income Tax department) ಮತ್ತು ಜಾರಿ ನಿರ್ದೇಶನಾಲಯಗಳನ್ನು (Enforcement Directorate) ಬಳಸಿಕೊಳ್ಳಲಾಗುತ್ತಿದೆ ಎಂದ ಈಶ್ವರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿಶೇಷ ಗುಣಗಾನ ಮಾಡಿದರು.

ಶಿವಕುಮಾರ್ ಅವರನ್ನು ಮುಟ್ಟುವ ತಾಕತ್ತು ಯಾರಿಗೂ ಇಲ್ಲ, ಅವರು ಕೇವಲ ಕನಕಪುರದ ಬಂಡೆಯಲ್ಲ ಕರ್ನಾಟಕದ ಬಂಡೆ ಎಂದು ಈಶ್ವರ್ ಹೇಳಿದರು. ಶಿವಕುಮಾರ್ ಮತ್ತು ಸಿದ್ದರಾಮಯ್ಯ ತಾಕತ್ತು ಬಿಜೆಪಿಯವರಿಗೆ ಗೊತ್ತಿಲ್ಲ, ನಿನ್ನೆ ಗೃಹ ಸಚಿವ ಅಮಿತ್ ಶಾ ಅವರು ಮಾತಾಡುವಾಗ, ಸಿಎಂ ಮತ್ತು ಡಿಸಿಎಂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಅಂತ ಯಾಕೆ ಹೇಳಿದರು ಅನ್ನೋದನ್ನು ರಾಜ್ಯ ಬಿಜೆಪಿ ನಾಯಕರು ತಿಳಿದುಕೊಳ್ಳಲಿ ಎಂದು ಈಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ