ಕೋಲಾರ ಡಿಸಿ ಕಚೇರಿಯ ಚುನಾವಣಾ ವಿಭಾಗ ಸಿಬ್ಬಂದಿ ಮೇಲೆ ರೇಗಿದ ಕಾಂಗ್ರೆಸ್ ಶಾಸಕ ಎಸ್​ಎನ್ ನಾರಾಯಣಸ್ವಾಮಿ

Updated on: Jun 09, 2025 | 7:00 PM

ಕಚೇರಿಯಲ್ಲಿದ್ದ ಕೆಲ ಅಧಿಕಾರಿಗಳ ಮೇಲೂ ಶಾಸಕ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಸಿಬ್ಬಂದಿಯನ್ನು ಕೈಗೊಂಬೆ ಮಾಡಿಕೊಂಡು ನಿಮ್ಮ ಮನಸ್ಸಿಗೆ ಬಂದಂತೆ ಅವರನ್ನು ಆಡಿಸುತ್ತೀರಿ ಎಂದು ಶಾಸಕ ಗರಂ ಆದರೆಂದು ವರದಿಯಾಗಿದೆ. ಶಾಸಕನನ್ನು ಕಚೇರಿಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕಾಯುವಂತೆ ಮಾಡಿತೋ ಅಥವಾ ತಾಂತ್ರಿಕ ದೋಷಗಳಿಂದ ತಡವಾಯಿತೋ ಗೊತ್ತಾಗಿಲ್ಲ.

ಕೋಲಾರ, ಜೂನ್ 9: ಜಿಲ್ಲೆಯ ಬಂಗಾರುಪೇಟೆಯ ಕಾಂಗ್ರೆಸ್ ಶಾಸಕ ಎಸ್​ಎನ್ ನಾರಾಯಣಸ್ವಾಮಿ ಇಂದು ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾ ಬ್ರ್ಯಾಂಚ್​ನಲ್ಲಿ (election section) ಕೂಗಾಡಿದ ಘಟನೆ ನಡೆಯಿತು. ಕೋಲಾರ ಹಾಲು ಒಕ್ಕೂಟ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ನಾರಾಯಾಣಸ್ವಾಮಿ ಅಂತಿಮ ಮತದಾರರ ಪಟ್ಟಿಯ ಪ್ರತಿಯನ್ನು ಪಡೆಯಲು ಚುನಾವಣಾ ಶಾಖೆಗೆ ಬಂದಿದ್ದರು. ಅದರೆ ಪಟ್ಟಿಯ ಪ್ರತಿ ನೀಡಲು ತಡಮಾಡಿದ್ದಕ್ಕೆ ಕೋಪಗೊಂಡ ನಾರಾಯಣಸ್ವಾಮಿ ಅಲ್ಲಿದ್ದ ಸಿಬ್ಬಂದಿಯ ಮೇಲೆ ರೇಗಿದರು.

ಇದನ್ನೂ ಓದಿ:  ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More