ತಮ್ಮ ರಾಜಕೀಯ ಗುರು ದೇವೇಗೌಡರು ಅಂತ ಹೇಳಿದರು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್!
ಜಮೀರ್ ಹೇಳಿಕೆಗೆ ಅವರ ಈಗಿನ ಗುರು ಸಿದ್ದರಾಮಯ್ಯ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕುತೂಹಲಕಾರಿ ವಿಷಯವಾಗಿದೆ.
ಹಾವೇರಿ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಏನೇನೋ ಬಡಬಡಿಸಲಾರಂಭಿಸಿದ್ದಾರೆ ಮಾರಾಯ್ರೇ. ಆದಿ ಚುಂಚನಗಿರಿ ಮಠದಲ್ಲಿ ತಾನು ಬೆಳೆದಿದ್ದು ಅಂತ ಒಂದು ಕಡೆ ಹೇಳಿದರೆ, ಹಾವೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ತಮ್ಮ ರಾಜಕೀಯ ಗುರು ಹೆಚ್ ಡಿ ದೇವೇಗೌಡರು (HD Devegowda) ಅಂತ ಹೇಳಿದ್ದಾರೆ. ಜಮೀರ್ ಹೇಳಿಕೆಗೆ ಅವರ ಈಗಿನ ಗುರು ಸಿದ್ದರಾಮಯ್ಯ (Siddaramaiah) ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕುತೂಹಲಕಾರಿ ವಿಷಯವಾಗಿದೆ.

