ಕಾಂಗ್ರೆಸ್ ನಾಯಕರ 50 ಕೋಟಿ ರೂ. ಆಮಿಷ ಆರೋಪ ಬ್ಲ್ಯಾಕ್ಮೇಲ್ ಮಾಡುವ ತಂತ್ರಗಾರಿಕೆ: ಬಸನಗೌಡ ಪಾಟೀಲ್ ಯತ್ನಾಳ್
ಜಾರಕಿಹೊಳಿ ಅವರು ಹೇಳಿದ ಹಾಗೆ ಸರ್ಕಾರ ಉರುಳುವ ಆತಂಕ ಶಿವಕುಮಾರ್ ರನ್ನು ಕಾಡುತ್ತಿದೆ. ಯಾಕೆಂದರೆ ರಾಜಕೀಯ ಪಕ್ಷಗಳಲ್ಲಿ ನಡೆಯುವ ಭೂಕಂಪಗಳು ಮೊದಲು ಬೆಳಗಾವಿ ನಾಯಕರ ಅರಿವಿಗೆ ಬರುತ್ತವೆ ಎಂದು ಹೇಳಿದ ಯತ್ನಾಳ್ ಕರ್ನಾಟಕ ಸರ್ಕಾರದಲ್ಲಿ ನಕಲಿ ಸಿಡಿಗಳನ್ನು ಸೃಷ್ಟಿಸುವ ಬಂಡೆಗಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಯತ್ನಾಳ್ ಹೇಳಿದರು.
ವಿಜಯಪುರ: ರಮೇಶ್ ಜಾರಕಿಹೊಳಿ (Ramesh Jarkiholi) ನಿನ್ನೆ ಬೆಳಗಾವಿಯಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಮಾಡಿದ ಆರೋಪಗಳನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸಮರ್ಥಿಸಿಕೊಂಡರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಯತ್ನಾಳ್, ಜಾರಕಿಹೊಳಿ ಅವರು ಹೇಳಿದ ಹಾಗೆ ಸರ್ಕಾರ ಉರುಳುವ ಆತಂಕ ಶಿವಕುಮಾರ್ ರನ್ನು ಕಾಡುತ್ತಿದೆ. ಯಾಕೆಂದರೆ ರಾಜಕೀಯ ಪಕ್ಷಗಳಲ್ಲಿ ನಡೆಯುವ ಭೂಕಂಪಗಳು ಮೊದಲು ಬೆಳಗಾವಿ ನಾಯಕರ ಅರಿವಿಗೆ ಬರುತ್ತವೆ ಎಂದು ಹೇಳಿದ ಯತ್ನಾಳ್ ಕರ್ನಾಟಕ ಸರ್ಕಾರದಲ್ಲಿ ನಕಲಿ ಸಿಡಿಗಳನ್ನು ಸೃಷ್ಟಿಸುವ ಬಂಡೆಗಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು. ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷವೊಡ್ಡಿ ಆಪರೇಶನ್ ಕಮಲ ಪುನರಾರಂಭಿಸಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ತನಿಖಾಧಿಕಾರಿಗಳಿಗೆ ನೀಡಿ ತನಿಖೆ ಮಾಡಿಸಲಿ, ಅವೆಲ್ಲ ವ್ಯರ್ಥ ಮತ್ತು ಸುಳ್ಳು ಆರೋಪಗಳು, ಕಾಂಗ್ರೆಸ್ ನಾಯಕರ ಬ್ಲ್ಯಾಕ್ ಮೇಲ್ ಮಾಡುವ ತಂತ್ರ ಅದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ