ಹಿಂದೂ ಪದ ಮತ್ತು ಹಿಂದೂಗಳನ್ನು ಅವಹೇಳನ ಮಾಡಿರುವ ಸತೀಶ್ ಜಾರಕಿಹೊಳಿಯನ್ನು ಕಾಂಗ್ರೆಸ್ ಪಕ್ಷ ಉಚ್ಚಾಟಿಸಬೇಕು: ರೇಣುಕಾಚಾರ್ಯ
ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ ಅವರು ಸಹ ಸತೀಶ್ ಹೇಳಿಕೆಯನ್ನು ಖಂಡಿಸಿದ್ದು ಕಾಂಗ್ರೆಸ್ ಪಕ್ಷ ಅವರನ್ನು ಉಚ್ಚಾಟಿಸಬೇಕೆಂದು ಹೇಳಿದ್ದಾರೆ.
ದಾವಣಗೆರೆ: ಹಿಂದೂ ಪದ ಪರ್ಷಿಯನ್ ಮೂಲದ್ದು, ಅದೊಂದು ಅಸಭ್ಯ ಪದ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದು ಭಾರೀ ವಿವಾದ ಸೃಷ್ಟಿಸಿದೆ. ಖುದ್ದು ಅವರ ಪಕ್ಷದ ನಾಯಕರೇ ಕ್ಷಮಾಪಣೆ ಕೇಳುವಂತೆ ಸತೀಶ್ ಗೆ ಹೇಳುತ್ತಿದ್ದಾರೆ. ಇತ್ತ ಹೊನ್ನಾಳಿಯಲ್ಲಿ ಮಗನ ಸಾವಿನ ಆಘಾತ ಮತ್ತು ದುಃಖದಿಂದ ಚೇತರಿಸಿಕೊಳ್ಳುತ್ತಿರುವ ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಸಹ ಸತೀಶ್ ಹೇಳಿಕೆಯನ್ನು ಖಂಡಿಸಿದ್ದು ಕಾಂಗ್ರೆಸ್ (Congress) ಪಕ್ಷ ಅವರನ್ನು ಉಚ್ಚಾಟಿಸಬೇಕೆಂದು ಹೇಳಿದ್ದಾರೆ. ತನಗೆ ಹಿಂದೂಗಳ ವೋಟುಗಳು ಬೇಕಿಲ್ಲವೆಂದು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಅವರು ಒತ್ತಾಯಿಸಿದರು.