Channapatna By Election Result: ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದ ಕಾಂಗ್ರೆಸ್ ಬೆಂಬಲಿಗರು
Channapatna By Election Result: ರಾಜ್ಯದಲ್ಲಿ ಚನ್ನಪಟ್ಟಣ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು ನಿಜವಾದರೂ ರಾಜ್ಯದ ಎಲ್ಲರ ಕಣ್ಣು ಕುಮಾರಸ್ವಾಮಿ ತೆರವು ಮಾಡಿದ ಕ್ಷೇತ್ರದ ಮೇಲೆ ನೆಟ್ಟಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವಗೌಡರ ಕುಟುಂಬ ಮತ್ತ್ತು ಡಿಕೆ ಸಹೋದರರು ಈ ಉಪ ಚುನಾವಣೆಯನ್ನು ಪ್ರತಿಷ್ಠೆಯ ಪ್ರತೀಕವೆಂದು ಪರಿಗಣಿಸಿದ್ದಾರೆ.
ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ 10ನೇ ಸುತ್ತಿನ ಮತಎಣಿಕೆಯ ನಂತರ 18,000ಕ್ಕಿಂತ ಹೆಚ್ಚು ಮತಗಳ ಅಂತರ ಮುನ್ನಡೆ ಸಾಧಿಸಿದ್ದಾರೆ. ಮತಎಣಿಕೆ ಕೇಂದ್ರದ ಮುಂದೆ ನೆರೆದಿರುವ ಯೋಗೇಶ್ವರ್ ಮತ್ತು ಕಾಂಗ್ರೆಸ್ ಬೆಂಬಲಿಗರು ಕುಣಿದು ಕುಪ್ಪಳಿಸುತ್ತಾ ಈಗಲೇ ಸಂಭ್ರಮ ಆಚರಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಲೀಡ್ ಉಲ್ಬಣಿಸುತ್ತಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮೌನವಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us