CM in Session: ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೇ 40 ಕಮೀಶನ್ ಬಗ್ಗೆ ಆರೋಪ ಮಾಡಿದರು, ಪುರಾವೆ ನೀಡಲಿಲ್ಲ: ಬಸವರಾಜ ಬೊಮ್ಮಾಯಿ

|

Updated on: Feb 20, 2023 | 5:45 PM

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೇಲಿಂದ ಮೇಲೆ ಆರೋಪಗಳನ್ನು ಮಾಡಿದರೇ ಹೊರತು ಯಾವುದಕ್ಕೂ ಪುರಾವೆ ಒದಗಿಸಲಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರು: ಶುಕ್ರವಾರ ಬಜೆಟ್ ಮಂಡನೆ ಮಾಡಿದ ಬಳಿಕ ಸೋಮವಾರ ಸದನದಲ್ಲಿ ರಾಜ್ಯಪಾರರ ವಂದನಾ ನಿರ್ಣಯದ ಮೇಲೆ ಮಾತಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ವಿರೋಧ ಪಕ್ಷ ಅದರಲ್ಲೂ ಕಾಂಗ್ರೆಸ್ ನಾಯಕರು ಸರ್ಕಾರವನ್ನು 40% ಸರ್ಕಾರ ಅನ್ನುತ್ತಾರೆ. ಆದರೆ ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಯಾವ ರಾಜ್ಯದಲ್ಲಿ ಜಾಸ್ತಿಯಿದೆ ಅಂತ ನಡೆದ ಮೂರು ಸಮೀಕ್ಷೆಗಳಲ್ಲೂ (Survey) ಕರ್ನಾಟಕ ಅಗ್ರಸ್ಥಾನದಲ್ಲಿತ್ತು ಎಂದು ಮುಖ್ಯಮಂತ್ರಿಗಳು ಹೇಳಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೇಲಿಂದ ಮೇಲೆ ಆರೋಪಗಳನ್ನು ಮಾಡಿದರೇ ಹೊರತು ಯಾವುದಕ್ಕೂ ಪುರಾವೆ ಒದಗಿಸಲಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ