ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ; ಪ್ರಧಾನಿ ಮೋದಿಯವರ ‘ಮಿತ ಬಳಕೆ’ ಕರೆಗೆ ವ್ಯಾಪಾರಿಗಳ ಸಾಥ್!
ಮೈಸೂರಿನಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 3 ರೂಪಾಯಿ ಹೆಚ್ಚಾಗಿ 141 ರೂಪಾಯಿ ತಲುಪಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಡುಗೆ ಎಣ್ಣೆ ವ್ಯಾಪಾರಿ ಅಣ್ಣೋಜಿ ರಾವ್, ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ಪ್ರಧಾನಿ ಮೋದಿ ನೀಡಿರುವ ಸಲಹೆ ದೇಶದ ಹಿತದೃಷ್ಟಿ ಮತ್ತು ಆರೋಗ್ಯದ ದೃಷ್ಟಿಯಿಂದ ಸರಿ ಎಂದಿದ್ದಾರೆ. ಈ ವಿಚಾರಕ್ಕೆ ಮೈಸೂರಿನ ಸಾರ್ವಜನಿಕರು ಆತಂಕ ಮತ್ತು ಸಂತೋಷ ಮಿಶ್ರಿತ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು, ಮೇ.11: ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ 138 ರೂಪಾಯಿ ಇದ್ದ ಅಡುಗೆ ಎಣ್ಣೆಯು ಈಗ 141 ರೂಪಾಯಿ ತಲುಪಿದೆ. ಈ ಕುರಿತು ವ್ಯಾಪಾರಿ ಅಣ್ಣೋಜಿ ರಾವ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ನೀಡಿರುವ ಸಲಹೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ತಮ್ಮ ವ್ಯಾಪಾರದ ದೃಷ್ಟಿಯಿಂದ ಎಣ್ಣೆ ಕಡಿಮೆ ಬಳಸಿ ಎಂದು ಹೇಳುವುದು ತಪ್ಪಾದರೂ, ದೇಶದ ಹಿತದೃಷ್ಟಿ, ಜನರ ಆರೋಗ್ಯ ಹಾಗೂ ಯುದ್ಧದ ಪರಿಸ್ಥಿತಿಯ ಕಾರಣದಿಂದ ಮೋದಿ ಅವರ ಸಲಹೆ ಸರಿಯಾಗಿದೆ ಎಂದು ಅಣ್ಣೋಜಿ ರಾವ್ ಅಭಿಪ್ರಾಯಪಟ್ಟಿದ್ದಾರೆ. ಟಿವಿ9 ಕನ್ನಡದ ಪ್ರತಿನಿಧಿ ರಾಮ್ ಅವರು ಮೈಸೂರಿನಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಸಂಗ್ರಹಿಸಿದ್ದಾರೆ. ಪ್ರಧಾನಿಯವರ ಈ ಹೇಳಿಕೆಯು ಕೆಲವರಲ್ಲಿ ಆತಂಕ ಮೂಡಿಸಿದ್ದರೆ, ಮತ್ತೆ ಕೆಲವರು ಇದು ಮುಂದಿನ ಪೀಳಿಗೆಗೆ ಸಂಪನ್ಮೂಲಗಳನ್ನು ಉಳಿಸಲು ಮತ್ತು ಪರಿಸರ ಸಂರಕ್ಷಣೆಗೆ ಸಹಕಾರಿ ಎಂಬ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿ ವಾಹನಗಳನ್ನು ಬಳಸುವುದು, ಟ್ರಿಪ್‌ಗಳಿಗೆ ಹೋಗುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸುವುದನ್ನು ಕಡಿಮೆ ಮಾಡಬೇಕು ಎಂಬ ಅಂಶಕ್ಕೆ ಸಾರ್ವಜನಿಕರು ಒಪ್ಪಿಗೆ ಸೂಚಿಸಿದ್ದಾರೆ.
ವಿಡಿಯೋ ಸುದ್ದಿಗಖನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

