ಆಸ್ಪತ್ರೆಯಲ್ಲಿ ನಮ್ಮನ್ನು ನಾಯಿಗಳಂತೆ ನೋಡ್ತಿದ್ದಾರೆ: ಕೊರೊನಾ ಶಂಕಿತ ಕಂಡಕ್ಟರ್ ಕುಟುಂಬ ಕಣ್ಣೀರು

|

Updated on: Aug 01, 2020 | 5:36 PM

[lazy-load-videos-and-sticky-control id=”MA1CfPVlYbw”] ಬಾಗಲಕೋಟೆ:ಆಸ್ಪತ್ರೆಗೆ ದಾಖಲಾಗಿ ಐದು ದಿನ ಕಳೆದರೂ ಕೊರೊನಾ ವರದಿ ಬಾರದ ಕಾರಣ, ಶಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ದೊರಕದೆ ನರಳುತ್ತಿರುವ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಬಸ್ ಡಿಪೋದಲ್ಲಿ ಕಂಡಕ್ಟರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ಹೀಗಾಗಿ ಅವರನ್ನು ಬಾಗಲಕೋಟೆಯ ಜಿಲ್ಲಾ ಕೊವಿಡ್ ಸೆಂಟರಿಗೆ ಚಿಕಿತ್ಸೆಗೆಂದು ಸೇರಿಸಲಾಗಿದೆ. ಪತ್ನಿ ಹಾಗೂ ಮಗನ ವಿಡಿಯೋ ಆದರೆ ಐದು ದಿನ ಕಳೆದರೂ ಅವರ ಕೊವಿಡ್ ವರದಿ ಇನ್ನೂ […]

ಆಸ್ಪತ್ರೆಯಲ್ಲಿ ನಮ್ಮನ್ನು ನಾಯಿಗಳಂತೆ ನೋಡ್ತಿದ್ದಾರೆ: ಕೊರೊನಾ ಶಂಕಿತ ಕಂಡಕ್ಟರ್ ಕುಟುಂಬ ಕಣ್ಣೀರು
Follow us on

[lazy-load-videos-and-sticky-control id=”MA1CfPVlYbw”]

ಬಾಗಲಕೋಟೆ:ಆಸ್ಪತ್ರೆಗೆ ದಾಖಲಾಗಿ ಐದು ದಿನ ಕಳೆದರೂ ಕೊರೊನಾ ವರದಿ ಬಾರದ ಕಾರಣ, ಶಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ದೊರಕದೆ ನರಳುತ್ತಿರುವ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಬಸ್ ಡಿಪೋದಲ್ಲಿ ಕಂಡಕ್ಟರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ಹೀಗಾಗಿ ಅವರನ್ನು ಬಾಗಲಕೋಟೆಯ ಜಿಲ್ಲಾ ಕೊವಿಡ್ ಸೆಂಟರಿಗೆ ಚಿಕಿತ್ಸೆಗೆಂದು ಸೇರಿಸಲಾಗಿದೆ.

ಪತ್ನಿ ಹಾಗೂ ಮಗನ ವಿಡಿಯೋ
ಆದರೆ ಐದು ದಿನ ಕಳೆದರೂ ಅವರ ಕೊವಿಡ್ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರೂ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. ಇದರಿಂದ ಮಾತನಾಡಲಾಗದೆ ಕೊರೊನಾ ಶಂಕಿತ ಕಣ್ಣೀರಿಟ್ಟಿದ್ದಾರೆ.

ಪತಿಯ ಈ ಸ್ಥಿತಿಯನ್ನು ಕಂಡು ಕಣ್ಣೀರಿಡುತ್ತಿರುವ ಪತ್ನಿ ಹಾಗೂ ಆತನ ಮಗ ವಿಡಿಯೋ ಕಾಲ್ ಮುಖಾಂತರ ಕೊರೊನಾ ಶಂಕಿತ ಕಂಡಕ್ಟರ್ ನರಳಾಟದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು, ನಮ್ಮನ್ನು ಆಸ್ಪತ್ರೆಗಳಲ್ಲಿ ನಾಯಿಗಳಂತೆ ನೋಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

Published On - 1:51 pm, Sat, 1 August 20