ವಿಧಾನ ಸೌಧದ ಮುಂಭಾಗ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡ ದಂಪತಿ ಬಗ್ಗೆ ಮಾಹಿತಿ ಇಲ್ಲ: ಸಚಿವ ಜಮೀರ್ ಅಹ್ಮದ್ ಖಾನ್

|

Updated on: Jan 10, 2024 | 4:01 PM

ಇಂದು ಮುಂಜಾನೆ ಬೆಂಗಳೂರು ಜೆಜೆ ನಗರದ ಶಾಯಿಸ್ತಾ ಬಾನು ಮತ್ತು ಮೊಹಮ್ಮದ್ ಮುನಾಯಿದ್ ಹೆಸರಿನ ದಂಪತಿ ವಿಧಾನ ಸೌಧದ ಬಳಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಾಗ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ ಮತ್ತು ವಿಧಾನ ಸೌಧ ಪೊಲೀಸ್ ಠಾಣೆಗೆ ಕರೆದೊಯ್ದು ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 309 ಮತ್ತು 290ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು: ಬ್ಯಾಂಕ್ ನಿಂದ ಪಡೆದ ಸಾಲವನ್ನು (bank loan) ಮರುಪಾವತಿ ಮಾಡದ ಕಾರಣ ಬ್ಯಾಂಕ್ ಸಿಬ್ಬಂದಿ ತಮ್ಮ ಜಮೀನು ಹರಾಜಿಗೆ ಹಾಕಿದ್ದರಿಂದ ಹತಾಶೆಗೊಂಡ ದಂಪತಿ ವಿಧಾನಸೌಧ (Vidhan Soudha) ಮುಂಭಾಗ ಮೈಮೇಲೆ ಸೀಮೆಯೆಣ್ಣೆ ಸುರಿದು ಕೊಳ್ಳುವಾಗ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಇದೇ ವಿಷಯವಾಗಿ ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಪ್ರಶ್ಮಿಸಿದಾಗ ಅವರು ಸಿಡುಕುವ ಧಾಟಿಯಲ್ಲಿ ಮಾತಾಡಿದರು. ಘಟನೆ ಬಗ್ಗೆ ತನ್ನಲ್ಲಿ ಮಾಹಿತಿಯೇ ಇಲ್ಲವೆಂದು ಹೇಳಿ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಅನ್ನುತ್ತಾರೆ. ಸರ್ ಅವರು ನಿಮ್ಮ ಕಚೇರಿಗೆ ಬಂದಿದ್ದರಂತೆ ಅಂತ ಪತ್ರಕರ್ತರು ಹೇಳಿದಾಗ ಜಮೀರ್; ಬ್ರದರ್, ಸದ್ಯಕ್ಕೆ ತನ್ನಲ್ಲಿ ಯಾವುದೇ ಮಾಹಿತಿ ಇಲ್ಲ, ಅದನ್ನು ಸಂಗ್ರಹಿಸಿದ ಬಳಿಕ ಮಾತಾಡುತ್ತೇನೆ ಎನ್ನುತ್ತಾರೆ. ಇಂದು ಮುಂಜಾನೆ ಬೆಂಗಳೂರು ಜೆಜೆ ನಗರದ ಶಾಯಿಸ್ತಾ ಬಾನು ಮತ್ತು ಮೊಹಮ್ಮದ್ ಮುನಾಯಿದ್ ಹೆಸರಿನ ದಂಪತಿ ವಿಧಾನ ಸೌಧದ ಬಳಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಾಗ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ ಮತ್ತು ವಿಧಾನ ಸೌಧ ಪೊಲೀಸ್ ಠಾಣೆಗೆ ಕರೆದೊಯ್ದು ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 309 ಮತ್ತು 290ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಮುಚ್ಚಳಿಕೆಯೊಂದನ್ನು ಬರೆಸಿಕೊಂಡು ದಂಪತಿಯನ್ನು ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ