ಪ್ರಧಾನಿ ಮೋದಿಗೆ ಚನ್ನಪಟ್ಟಣದ ಗೊಂಬೆ ಉಡುಗೊರೆ ನೀಡಿದ ಸಿಪಿ ಯೋಗೇಶ್ವರ
ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.30) ಗೊಂಬೆಗಳ ನಾಡು ಚನ್ನಪಟ್ಟಣಕ್ಕೆ ಭೇಟಿ ನೀಡಿದರು. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ ಅವರ ಪರ ಮತಾಯಾಚಿಸಿದರು.
ರಾಮನಗರ: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏ.30) ಗೊಂಬೆಗಳ ನಾಡು ಚನ್ನಪಟ್ಟಣಕ್ಕೆ ಭೇಟಿ ನೀಡಿದರು. ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೇಶ್ವರ ಅವರ ಪರ ಮತಾಯಾಚಿಸಿದರು. ಈ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ಇನ್ನು ಪ್ರಧಾನಿ ಮೋದಿಯವರು ದೇಶದ ಯಾವುದೇ ಪ್ರದೇಕ್ಕೆ ಹೋದರು ಸ್ಥಳಿಯ ವಿಶೇಷತೆಗಳು ಉಡುಗೊರೆ ರೂಪದಲ್ಲಿ ದೊರೆಯುತ್ತವೆ. ಮತ್ತು ಪ್ರಧಾನಿ ಮೋದಿಯವರು ಈ ಹಿಂದೆ ಮನ್ ಕೀ ಬಾತ್ನಲ್ಲಿ ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಉಲ್ಲೇಖಿಸಿದ್ದರು. ಈಗ ಪ್ರಧಾನಿ ಮೋದಿಯವರಿಗೆಚನ್ನಪಟ್ಟಣದ ಗೊಂಬೆಯನ್ನು ಅಭ್ಯರ್ಥಿ ಸಿಪಿ ಯೋಗೇಶ್ವರ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಈ ಉಡುಗೊರೆ ಬಹಳ ವಿಶೇಷತೆಯಿಂದ ಕೂಡಿದೆ. ಆಲೆ ಮರದಿಂದ ಮಾಡಿರುವ ಒಂದುವರೆಯಿಂದ ಎರಡು ಅಡಿ ಉದ್ದದ ಆಂಜನೇಯನ ಮೂರ್ತಿಯನ್ನು ನೀಡಿದ್ದಾರೆ.
Published on: Apr 30, 2023 03:14 PM