ಬದ್ಧ ರಾಜಕೀಯ ವೈರಿ ಕುಮಾರಸ್ವಾಮಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಸಿಪಿ ಯೋಗೇಶ್ವರ

|

Updated on: Sep 01, 2023 | 7:05 PM

ಕುಮಾರಸ್ವಾಮಿಯವರನ್ನು ಮಾತಾಡಿಸಿ ಹೊರಬಂದ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಯೋಗೇಶ್ವರ್, ಮೂರು ದಶಕಗಳಿಂದ ಕುಮಾರಸ್ವಾಮಿ ಅವರೊಂದಿಗೆ ರಾಜಕೀಯ ವೈರತ್ವ ಇರೋದು ನಿಜ, ಆದರೆ ವೈಯಕ್ತಿಕವಾಗಿ ತಮ್ಮ ನಡುವೆ ಯಾವುದೇ ವೈಷಮ್ಯ ಇಲ್ಲ ಎಂದರು. ಅವರ ಆರೋಗ್ಯ ಸುಧಾರಿಸಿದೆ, ಲವಲವಿಕೆಯಿಂದ ಮಾತಾಡಿದರು ಎಂದು ಯೋಗೇಶ್ವರ್ ಹೇಳಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅನಾರೋಗ್ಯ ಅವರ ಕಡು ವೈರಿಗಳ ಮನೋಭಾವನೆಯನ್ನು ಸಹ ಬದಲಾಯಿಸಿದೆ ಮಾರಾಯ್ರೇ. ನಿನ್ನೆ ವರದಿಯಾಗುರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆಸ್ಪತ್ರೆಗೆ ಬಂದು ಕುಮಾರಸ್ವಾಮಿಯವರನ್ನು ಮಾತಾಡಿಸಿಕೊಂಡು ಹೋದರು. ಅವರೊಂದಿಗೆ ಕುಮಾರಸ್ವಾಮಿಯ ಇನ್ನೊಬ್ಬ ರಾಜಕೀಯ ಕಡು ವೈರಿ ಎನ್ ಚಲುವರಾಯಸ್ವಾಮಿ (N Cheluvarayaswamy) ಸಹ ಬಂದಿದ್ದರು. ಇವತ್ತು ಮೊನ್ನೆಯಷ್ಟೇ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ ಡಿಕೆ ವಿರುದ್ಧ ಸೋಲುಂಡ ಮಾಜಿ ಸಚಿವ ಸಿಪಿ ಯೋಗೇಶ್ವರ (CP Yogeshwar ) ತಮ್ಮ ಆಜನ್ಮ ರಾಜಕೀಯ ವೈರಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದರು. ಕುಮಾರಸ್ವಾಮಿಯವರನ್ನು ಮಾತಾಡಿಸಿ ಹೊರಬಂದ ಬಳಿಕ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡಿದ ಯೋಗೇಶ್ವರ್, ಮೂರು ದಶಕಗಳಿಂದ ಕುಮಾರಸ್ವಾಮಿ ಅವರೊಂದಿಗೆ ರಾಜಕೀಯ ವೈರತ್ವ ಇರೋದು ನಿಜ, ಆದರೆ ವೈಯಕ್ತಿಕವಾಗಿ ತಮ್ಮ ನಡುವೆ ಯಾವುದೇ ವೈಷಮ್ಯ ಇಲ್ಲ ಎಂದರು. ಅವರ ಆರೋಗ್ಯ ಸುಧಾರಿಸಿದೆ, ಲವಲವಿಕೆಯಿಂದ ಮಾತಾಡಿದರು ಎಂದು ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ