AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ ಎಸೆತದಲ್ಲಿ 2 ರನ್ ಓಡಿ ಪಂದ್ಯ ಗೆದ್ದ ಫಾಲ್ಕನ್ಸ್​

ಕೊನೆಯ ಎಸೆತದಲ್ಲಿ 2 ರನ್ ಓಡಿ ಪಂದ್ಯ ಗೆದ್ದ ಫಾಲ್ಕನ್ಸ್​

ಝಾಹಿರ್ ಯೂಸುಫ್
|

Updated on: Sep 06, 2025 | 11:09 AM

Share

188 ರನ್​ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಅ್ಯಂಡ್ರಿಸ್ ಗೌಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಫಾಲ್ಕನ್ಸ್ ಪಡೆಗೆ ಗೆಲ್ಲಲು 12 ರನ್​ಗಳ ಅವಶ್ಯಕತೆಯಿತ್ತು. ಅದರಂತೆ ಕೊನೆಯ ಓವರ್​ ಎಸೆದ ಶೆರ್ಫೇನ್ ರದರ್​ಫೋರ್ಡ್​ ಮೊದಲೆರಡು ಎಸೆತಗಳಲ್ಲಿ ವೈಡ್ ಎಸೆದರು. ಆ ಬಳಿಕ 2 ರನ್ ನೀಡಿದರು. ಇನ್ನು ಎರಡನೇ ಎಸೆತದಲ್ಲಿ ಮತ್ತೊಂದು ವೈಡ್.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 22ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ಮತ್ತು ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದ ನಾಯಕ ಇಮಾದ್ ವಾಸಿಂ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾರ್ಬಡೋಸ್ ರಾಯಲ್ಸ್ ಪರ ಬ್ರಾಂಡನ್ ಕಿಂಗ್ 65 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 98 ರನ್ ಬಾರಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಬಾರ್ಬಡೋಸ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು.

188 ರನ್​ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಅ್ಯಂಡ್ರಿಸ್ ಗೌಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಫಾಲ್ಕನ್ಸ್ ಪಡೆಗೆ ಗೆಲ್ಲಲು 12 ರನ್​ಗಳ ಅವಶ್ಯಕತೆಯಿತ್ತು. ಅದರಂತೆ ಕೊನೆಯ ಓವರ್​ ಎಸೆದ ಶೆರ್ಫೇನ್ ರದರ್​ಫೋರ್ಡ್​ ಮೊದಲೆರಡು ಎಸೆತಗಳಲ್ಲಿ ವೈಡ್ ಎಸೆದರು. ಆ ಬಳಿಕ 2 ರನ್ ನೀಡಿದರು. ಇನ್ನು ಎರಡನೇ ಎಸೆತದಲ್ಲಿ ಮತ್ತೊಂದು ವೈಡ್.

ಆ ನಂತರ 2, 1, 1, 1 ರನ್ ನೀಡಿದರು. ಪರಿಣಾಮ ಅಂತಿಮ ಎಸೆತದಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ 2 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಶಮರ್ ಸ್ಪ್ರಿಂಗರ್ 2 ರನ್​ ಕಲೆಹಾಕುವ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ ಎಸೆತದಲ್ಲಿ ರೋಚಕ ಗೆಲುವು ತಂದುಕೊಟ್ಟರು.