‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’: ರವಿಚಂದ್ರನ್​ಗೆ ನೇರ ಪ್ರಶ್ನೆ ಕೇಳಿದ್ದ ಪತ್ನಿ

| Updated By: ಮದನ್​ ಕುಮಾರ್​

Updated on: Jun 20, 2022 | 2:40 PM

ವಿಕ್ರಮ್​ ರವಿಚಂದ್ರನ್​ ನಟನೆಯ ‘ತ್ರಿವಿಕ್ರಮ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ‘ಕ್ರೇಜಿ ಸ್ಟಾರ್​’ ರವಿಚಂದ್ರನ್ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ..

ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ (Crazy Star Ravichandran)​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ರೀತಿಯಲ್ಲಿ ಸಿನಿಮಾ ಮಾಡುವ ಮತ್ತೋರ್ವ ನಟ/ನಿರ್ದೇಶಕ ಇಲ್ಲ. ಅಷ್ಟರಮಟ್ಟಿಗೆ ‘ಕ್ರೇಜಿ ಸ್ಟಾರ್​’ ಡಿಫರೆಂಟ್​. ರವಿಚಂದ್ರನ್​ ಸಿನಿಮಾಗಳಲ್ಲಿ ನಾಯಕಿಯರನ್ನು ಗ್ಲಾಮರಸ್​ ಆಗಿ ತೋರಿಸುತ್ತಾರೆ. ರೊಮ್ಯಾಂಟಿಕ್​ ದೃಶ್ಯಗಳು ಸಖತ್​ ಕಲರ್​ಫುಲ್​ ಆಗಿ ಮೂಡಿಬರುತ್ತವೆ. ಅದನ್ನು ಜನ ಇಷ್ಟಪಟ್ಟಿದ್ದಾರೆ ಕೂಡ. ಈ ಬಗ್ಗೆ ರವಿಚಂದ್ರನ್​ಗೆ ಒಮ್ಮೆ ಪತ್ನಿ ಸುಮತಿ ಅವರು ನೇರವಾಗಿ ಪ್ರಶ್ನೆ ಕೇಳಿದ್ದರಂತೆ. ‘ಹುಡುಗಿಯರನ್ನು ಮುಟ್ಟದೇ ನಿಂಗೆ ಸಿನಿಮಾ ಮಾಡೋಕೆ ಬರಲ್ವಾ?’ ಎಂದು ಅವರು ಪ್ರಶ್ನೆ ಮಾಡಿದ್ದರು. ಅದಕ್ಕೆ ರವಿಚಂದ್ರನ್​ ನೀಡಿದ ಉತ್ತರ ಏನು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ..

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.