AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯಾನಕ ವಿಡಿಯೋ: ಮನೆಯ ತಾರಸಿಯಲ್ಲಿ ಬಾಂಬ್ ಸ್ಫೋಟ, ಮಹಿಳೆಯರು ಸೇರಿ ಎಲ್ಲರ ಬಟ್ಟೆಗೂ ತಗುಲಿದ ಬೆಂಕಿ

ಭಯಾನಕ ವಿಡಿಯೋ: ಮನೆಯ ತಾರಸಿಯಲ್ಲಿ ಬಾಂಬ್ ಸ್ಫೋಟ, ಮಹಿಳೆಯರು ಸೇರಿ ಎಲ್ಲರ ಬಟ್ಟೆಗೂ ತಗುಲಿದ ಬೆಂಕಿ

ನಯನಾ ರಾಜೀವ್
|

Updated on: Feb 16, 2026 | 8:00 AM

Share

ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದಲ್ಲಿ ಮನೆಯೊಂದರ ತಾರಸಿಯಲ್ಲಿ ನಡೆದ ಭಾರಿ ಬಾಂಬ್ ಸ್ಫೋಟ ಎಲ್ಲರನ್ನು ಬೆಚ್ಚಿಬೀಳಿಸಿದೆ. ಜನವರಿ 27ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯ ಈಗ ಹೊರಬಿದ್ದಿದೆ. ರೌಡಿ ಶೀಟರ್ ಶಾನವಾಜ್ ನವಾಬ್ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ವೀಡಿಯೊವನ್ನು ಒಂದೊಂದಾಗಿ ಪರಿಶೀಲಿಸುತ್ತಿದೆ.

ಭುವನೇಶ್ವರ, ಫೆಬ್ರವರಿ 16: ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಸುಂದರಪಾದ ಪ್ರದೇಶದಲ್ಲಿ ಮನೆಯೊಂದರ ತಾರಸಿಯಲ್ಲಿ ನಡೆದ ಭಾರಿ ಬಾಂಬ್ ಸ್ಫೋಟ ಎಲ್ಲರನ್ನು ಬೆಚ್ಚಿಬೀಳಿಸಿದೆ. ಜನವರಿ 27ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯ ಈಗ ಹೊರಬಿದ್ದಿದೆ. ರೌಡಿ ಶೀಟರ್ ಶಾನವಾಜ್ ನವಾಬ್ ಮನೆಯ ತಾರಸಿಯಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳೀಯ ಪೊಲೀಸರ ಸಹಯೋಗದೊಂದಿಗೆ ವೀಡಿಯೊವನ್ನು ಒಂದೊಂದಾಗಿ ಪರಿಶೀಲಿಸುತ್ತಿದೆ.

ಸ್ಫೋಟದಲ್ಲಿ ರೌಡಿ ಶೀಟರ್ ಕೂಡ ಗಾಯಗೊಂಡಿದ್ದಾನೆ. ಮೂವರು ಹೆಂಗಸರು ಕೂಡ ಇದ್ದರು. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸಲು ಕಾರಣವೇನು ಅದನ್ನು ಎಲ್ಲಿಗೆ ಸರಬರಾಜು ಮಾಡುತ್ತಿದ್ದ ಎಂದು ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.ಸಾಕ್ಷ್ಯಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಘಟನಾ ಸ್ಥಳಕ್ಕೆ ವೈಜ್ಞಾನಿಕ ತಂಡವನ್ನು ಕಳುಹಿಸಲಾಗಿದೆ. ಅಕ್ರಮ ಬಾಂಬ್ ತಯಾರಿಕೆಯಲ್ಲಿ ಇತರರು ಭಾಗಿಯಾಗಿದ್ದರೆ, ಅವರ ಬಗ್ಗೆ ಮಾಹಿತಿ ಪಡೆಯಲು ಗಾಯಾಳುಗಳು ಚೇತರಿಸಿಕೊಂಡ ನಂತರ ಅವರನ್ನು ವಿಚಾರಣೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ