11 ದಿನಗಳ ಕಬ್ಬನ್ ಪಾರ್ಕ್ ಪುಷ್ಪಮೇಳಕ್ಕೆ ಚಾಲನೆ: ಕಣ್ಮನ ಸೆಳೆದ ಬಗೆ ಬಗೆಯ ಹೂಗಳು
ಕಬ್ಬನ್ ಪಾರ್ಕ್‌ನಲ್ಲಿ 11 ದಿನಗಳ ಕಾಲ ನಡೆಯುತ್ತಿರುವ ಪುಷ್ಪಮೇಳವು ಸಾರ್ವಜನಿಕರಿಗೆ ಅನನ್ಯ ಅನುಭವ ನೀಡುತ್ತಿದೆ. ಲಾಲ್‌ಬಾಗ್ ಮಾದರಿಯಲ್ಲೇ ನಡೆಯುತ್ತಿರುವ ಈ ಹೂವಿನ ಹಬ್ಬದಲ್ಲಿ, Parachute Regiment Training Centreನಿಂದ ಸೇನಾ ರೈಫಲ್ಸ್ ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಇದು ಕೇವಲ ಹೂವುಗಳ ಸೌಂದರ್ಯವಲ್ಲದೆ, ಸೇನಾ ಶಕ್ತಿಯ ಪ್ರದರ್ಶನವಾಗಿಯೂ ಜನರ ಗಮನ ಸೆಳೆಯುತ್ತಿದೆ.
ಬೆಂಗಳೂರು, ನವೆಂಬರ್ 27: ಕಬ್ಬನ್ ಪಾರ್ಕ್‌ನಲ್ಲಿ ಇಂದಿನಿಂದ ಡಿ.7ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಸಿಎಸ್ ಶಾಲಿನಿ ರಜನೀಶ್ ಚಾಲನೆ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 10 ವರ್ಷಗಳ ಬಳಿಕ ಕಬ್ಬನ್ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಫಲಪುಷ್ಪ ಪ್ರದರ್ಶನಕ್ಕೆ 20ರಿಂದ 25 ಸಾವಿರ ಹೂವು ಕುಂಡಗಳ ಬಳಕೆ ಮಾಡಲಾಗಿದೆ. ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ತನಕ ವೀಕ್ಷಣೆಗೆ ಅವಕಾಶ ಇರಲಿದೆ. ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಹೂವಿನ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ Parachute Regiment Training Centreನಿಂದ ಆಯೋಜಿಸಲಾಗಿರುವ ಆರ್ಮಿ ರೈಫಲ್ಸ್ ಹಾಗೂ ಶಸ್ತ್ರಾಸ್ತ್ರ ಪ್ರದರ್ಶನ ನೋಡುರ ಗಮನ ಸೆಳೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
