Linking Fraud: ಪಡಿತರ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅಮಾಯಕ ಮಹಿಳೆಯರನ್ನು ದೋಚಲಾರಂಭಿಸಿರುವ ಸೈಬರ್ ಸೆಂಟರ್ ಗಳು!
ಮೂಲಗಳ ಲಿಂಕ್ ಮಾಡಲು ಸೈಬರ್ ಸೆಂಟರ್ ನವರು ಪ್ರತಿ ಮಹಿಳೆಯಿಂದ ರೂ. 250 ಪೀಕುತ್ತಿದ್ದಾರೆ.
ಕೋಲಾರ: ಇನ್ನು ಇಂಥದೆಲ್ಲ ಜಾಸ್ತಿ ನಡೆಯಲಿದೆ. ಕಾಂಗ್ರೆಸ್ ಪಕ್ಷ ಘೋಷಿಸಿರುವ ವಿವಿದ ಗ್ಯಾರಂಟಿಗಳ ಫಲಾನುಭವಿಗಳಾಗಲು (beneficiaries), ಪಡಿತರ ಕಾರ್ಡ್ ಗೆ (ration card) ಆಧಾರ್ ಕಾರ್ಡ್ (Aadhaar card) ಲಿಂಕ್ ಮಾಡಬೇಕು ಎಂಬ ವದಂತಿ ಕೆಜಿಎಫ್ ಪಟ್ಟಣದಲ್ಲಿ ಹಬ್ಬಿದೆ. ಹಾಗಾಗೇ, ಅಮಾಯಕ ಮಹಿಳೆಯರು ಆಧಾರ್ ಮತ್ತು ರೇಷನ್ ಕಾರ್ಡ್ ಗಳನ್ನು ಹಿಡಿದು, ಜಿರಾಕ್ಸ್ ಮತ್ತು ಸೈಬರ್ ಸೆಂಟರ್ ಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಮೂಲಗಳ ಲಿಂಕ್ ಮಾಡಲು ಸೈಬರ್ ಸೆಂಟರ್ ನವರು ಪ್ರತಿ ಮಹಿಳೆಯಿಂದ ರೂ. 250 ಪೀಕುತ್ತಿದ್ದಾರೆ. ವಿಷಯ ಗೊತ್ತಾದ ಕೂಡಲೇ ಸ್ಥಳೀಯ ತಹಸೀಲ್ದಾರ್ ಶ್ರೀನಿವಾಸ ಅವರು ಪೊಲೀಸರೊಂದಿಗೆ ಸೈಬರ್ ಸೆಂಟರ್ ಗಳಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ ಮತ್ತು ಎಚ್ಚರಿಕೆಯನ್ನೂ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ