Cyclone Biporjoy: ರಾಜ್ಯದಲ್ಲಿ ಬಿಪರ್ ಜಾಯ್ ಚಂಡಮಾರುತ ಆರ್ಭಟ; ಕರಾವಳಿಯಲ್ಲಿ ಆತಂಕ

Edited By: ಆಯೇಷಾ ಬಾನು

Updated on: Jun 13, 2023 | 11:23 AM

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿವೆ.

ಬಿಪರ್ ಜಾಯ್ ಚಂಡಮಾರುತ ಪರಿಣಾಮ ಕಾರವಾರದ ಸಮುದ್ರ ತೀರಗಳು ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಗೋಕರ್ಣ, ಮುರುಡೇಶ್ವರ, ಕಾರವಾರ ಕಡಲತೀರಗಳು ಪ್ರವಾಸಿಗರಿಲ್ಲದೆ ಖಾಲಿಯಾಗಿದ್ದು, ಸಂಪ್ರದಾಯಿಕ ದೋಣಿ ಮೂಲಕ ಮೀನು ಹಿಡಿಯಲು ಮೀನುಗಾರರು ವಿಫಲ ಯತ್ನ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಚೆಲ್ಲಾಪಿಲ್ಲಿಯಾಗಿದೆ. ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿವೆ.

Published on: Jun 13, 2023 11:20 AM
Loading...
Unable to load recommendations.
Follow Us
TV9 Web

TV9 Kannada

Read More