Rohini Vs Roopa: ಯಾವುದೇ ಸರ್ಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಿಸುವಷ್ಟು ಸಾಮರ್ಥ್ಯ ತನಗಿದೆ ಅಂತ ಡಿ ರೂಪಾ ಹೇಳಿಕೊಂಡಿದ್ದಾರೆ: ಆರ್ ಟಿ ಐ ಕಾರ್ಯಕರ್ತ

Rohini Vs Roopa: ಯಾವುದೇ ಸರ್ಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡಿಸುವಷ್ಟು ಸಾಮರ್ಥ್ಯ ತನಗಿದೆ ಅಂತ ಡಿ ರೂಪಾ ಹೇಳಿಕೊಂಡಿದ್ದಾರೆ: ಆರ್ ಟಿ ಐ ಕಾರ್ಯಕರ್ತ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 22, 2023 | 10:57 AM

ಒಬ್ಬ ಸರ್ಕಾರಿ ಅಧಿಕಾರಿಯಾಗಿ ರೂಪಾ ತನ್ನ ಮೇಲಿರುವ ಜವಾಬ್ದ್ದಾರಿಯನ್ನು ನಿಭಾಯಿಸುವುದನ್ನು ಬಿಟ್ಟು ತನ್ನ ವಿರುದ್ಧ ಬೇಹುಗಾರಿಕೆ ನಡೆಸಿದ್ದಾರೆ ಎಂದು ಗಂಗರಾಜು ಆರೋಪಿಸುತ್ತಾರೆ.

ಮೈಸೂರು: ಒಬ್ಬ ಆರ್ ಟಿ ಐ ಕಾರ್ಯಕರ್ತರಾಗಿರುವ ನಗರದ ನಿವಾಸಿ ಗಂಗರಾಜು (Gangaraju) ಅವರು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗೀಲ್ (D Roopa Moudgil) ಅವರ ಬಗ್ಗೆ ಕನ್ನಡಿಗರಿಗೆ ಗೊತ್ತಿರದ ಕೆಲ ವಿಷಯಗಳನ್ನು ಟಿವಿ9 ಕನ್ನಡ ವಾಹಿನಿಯ ಮುಂದೆ ಹೇಳಿಕೊಂಡಿದ್ದಾರೆ. ಅವರಾಡುವ ಮಾತು ಕೇಳುತ್ತಿದ್ದರೆ, ರೂಪಾ ಅದ್ಯಾವುದೋ ಕಾರಣಕ್ಕೆ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿರುವುದು ಸ್ಪಷ್ಟವಾಗುತ್ತದೆ. ರೂಪಾ ಅವರು ಸಿಂಧೂರಿ ವಿರುದ್ಧ ಆರೋಪಗಳ ಸರಣಿ ಹರಿಬಿಡುವ ಮೊದಲೇ ಗಂಗರಾಜು ಅವರ ಜೊತೆ ಸುಮಾರು 25 ನಿಮಿಷಗಳ ಕಾಲ ಮಾತಾಡಿದ್ದು, ಆ ಆಡಿಯೋ ರೆಕಾರ್ಡಿಂಗ್ ಆರ್ ಟಿ ಐ ಕಾರ್ಯಕರ್ತನಲ್ಲಿದೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ರೂಪಾ ತನ್ನ ಮೇಲಿರುವ ಜವಾಬ್ದ್ದಾರಿಯನ್ನು ನಿಭಾಯಿಸುವುದನ್ನು ಬಿಟ್ಟು ತನ್ನ ವಿರುದ್ಧ ಬೇಹುಗಾರಿಕೆ ನಡೆಸಿದ್ದಾರೆ ಎಂದು ಗಂಗರಾಜು ಆರೋಪಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ