ಮದುವೆ ತಯಾರಿ ಪರಿಶೀಲಿಸಿದ ನಟ ಧನಂಜಯ್: ಇಲ್ಲಿದೆ ವಿಡಿಯೋ
Daali Dhananjay: ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹ ಫೆಬ್ರವರಿ 15 ಮತ್ತು 16 ರಂದು ಬಲು ಅದ್ಧೂರಿಯಾಗಿ ನಡೆಯಲಿದೆ. ಮದುವೆ ಸಮಾರಂಭಕ್ಕೆ ಸಭಾಂಗಣ ನಿರ್ಮಾಣ ಕಾರ್ಯ ಶುರುವಾಗಿದ್ದು, ಇಂದು (ಫೆಬ್ರವರಿ 11) ಖುದ್ದು ಡಾಲಿ ಧನಂಜಯ್ ಸ್ಥಳಕ್ಕೆ ಭೇ ಟಿ ನೀಡಿ ನಿರ್ಮಾಣ ಕಾರ್ಯ ಪರಿಶೀಲನೆ ಮಾಡಿದರು.
ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಆಗಿದ್ದ ನಟ ಡಾಲಿ ಧನಂಜಯ್ ಇದೀಗ ಮದುವೆ ಆಗುತ್ತಿದ್ದಾರೆ. ಡಾಲಿ ಧನಂಜಯ್, ವೈದ್ಯೆ ಧನ್ಯತಾ ಅವರನ್ನು ವಿವಾಹವಾಗಲಿದ್ದು, ಮದುವೆ ಸಮಾರಂಭ ಫೆಬ್ರವರಿ 15 ಮತ್ತು 16 ರಂದು ಬಲು ಅದ್ಧೂರಿಯಾಗಿ ಮೈಸೂರಿನಲ್ಲಿ ನಡೆಯಲಿದೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗಿ ಆಗಲಿದ್ದಾರೆ. ಅದ್ಧೂರಿ ಸಭಾಂಗಣವನ್ನು ಮದುವೆಗಾಗಿ ನಿರ್ಮಿಸಲಾಗುತ್ತಿದೆ. ಮದುವೆಗೆ ತಯಾರಿ ಆರಂಭವಾಗಿದ್ದು, ಇಂದು (ಫೆಬ್ರವರಿ 11) ಖುದ್ದು ಡಾಲಿ ಧನಂಜಯ್ ಸ್ಥಳಕ್ಕೆ ಭೇಟಿ ನೀಡಿ ತಯಾರಿಯನ್ನು ಪರಿಶೀಲನೆ ನಡೆಸಿದರು. ಆಗಮಿಸುವ ಗಣ್ಯರಿಗೆ ಸಮಸ್ಯೆ ಎದುರಾಗದಂತೆ ಎಲ್ಲವನ್ನೂ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ