ವೇದಿಕೆಯಲ್ಲಿ ಹನುಮಂತನ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಪ್ರಭು ಚೌಹಾಣ್
ಬಿಗ್ ಬಾಸ್ ಟ್ರೋಫಿ ವಿನ್ ಆದ ಬಳಿಕ ಹನುಮಂತ ಅವರ ಖ್ಯಾತಿ ದುಪ್ಪಟ್ಟು ಆಗಿದೆ. ಅನೇಕ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ. ಹನುಮಂತನ ಪ್ರತಿಭೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಜಕೀಯದ ಮಂದಿಗೂ ಹನುಮಂತ ಫೇವರಿಟ್ ಆಗಿದ್ದಾರೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಎನ್ನಬಹುದು.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದಲ್ಲಿ ‘ಜಾನಪದ ಸಂಭ್ರಮ’ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ವಿನ್ನರ್ ಹನುಮಂತ ಅವರು ಭಾಗಿ ಆಗಿದ್ದಾರೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚೌಹಾಣ್ ಕೂಡ ಪಾಲ್ಗೊಂಡಿದ್ದಾರೆ. ಹನುಮಂತನ ಜೊತೆ ವೇದಿಕೆಯಲ್ಲಿ ಪ್ರಭು ಚೌಹಾಣ್ ಡ್ಯಾನ್ಸ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.