‘ಬಿಗ್ ಬಾಸ್ನಿಂದ 50 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ’: ವೇದಿಕೆಯಲ್ಲೇ ಹೇಳಿದ ಹನುಮಂತ
ಸಿಂಗರ್ ಹನುಮಂತ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅದಕ್ಕೆಲ್ಲ ಕಾರಣ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮ. ಈ ಶೋ ವಿನ್ನರ್ ಆದ ಬಳಿಕ ಅವರು ಅನೇಕ ಕಡೆಗಳಿಗೆ ಭೇಟಿ ನೀಡುತ್ತಿದ್ದಾರೆ. ಹಾವೇರಿಯಲ್ಲಿ ಕೂಡ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ಹನುಮಂತ ಅವರು ಬಿಗ್ ಬಾಸ್ ಶೋನಿಂದ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಟ್ರೋಫಿ ಗೆದ್ದ ಬಳಿಕ ಅವರು ಹಾವೇರಿಯಲ್ಲಿ ಜನರ ಎದುರು ಮಾತನಾಡಿದ್ದಾರೆ. 50 ಲಕ್ಷ ರೂಪಾಯಿ ಬಹುಮಾನದ ಹಣ ಏನು ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ‘ಇನ್ನೂ 50 ಲಕ್ಷ ರೂಪಾಯಿ ಬಂದಿಲ್ಲ. ಅದು ಬರಬೇಕು ಎಂದರೆ ಇನ್ನೂ ಸ್ವಲ್ಪ ಲೇಟ್ ಆಗುತ್ತದೆ. ಬಂದಾಗ ನಿಮಗೆ ಹೇಳುತ್ತೇನೆ’ ಎಂದಿದ್ದಾರೆ ಹನುಮಂತ. ಇದೇ ವೇದಿಕೆಯಲ್ಲಿ ಅವರು ದೋಸ್ತಾ ಧನರಾಜ್ ಬಗ್ಗೆಯೂ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

