ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಸಂಬಂಧ ಬಣಬಡಿದಾಟ ನಡೆದಿದೆ. ಬಿವೈ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಮಧ್ಯ ಬಹಿರಂಗ ಕಿತ್ತಾಟ ನಡೆಯುತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ಶುರುವಾಗಿದೆ. ಡಿಕೆ ಶಿವಕುಮಾರ್ ಬಣ ಹಾಗೂ ಸಿದ್ದರಾಮಯ್ಯ ಬಣದ ನಾಯಕರು ಪರೋಕ್ಷವಾಗಿ ಸಿಎಂ ಹುದ್ದೆ ಬಗ್ಗೆ ಕಿತ್ತಾಡುತ್ತಿದ್ದಾರೆ. ಇದರ ಮಧ್ಯೆ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಎಲ್ಲರ ಗಮನಸೆಳೆದಿದ್ದಾರೆ.
ದಾವಣಗೆರೆ, ಫೆಬ್ರವರಿ 09): ಕರ್ನಾಟಕ ಕಾಂಗ್ರೆಸ್ ಮನೆ ಬೂದಿ ಮುಚ್ಚಿದ ಕೆಂಡದಂತಿದ್ದು, ಪಟ್ಟದ ಆಟ ಮುಂದುವರೆದಿದೆ. ಸಿಎಂ ರೇಸ್‌ನಲ್ಲಿ ಇರುವವರ ಬೆಂಬಲಿಗರು ಅಲ್ಲಲ್ಲಿ ಮುಂದಿನ ಸಿಎಂ ಕೂಗೆಬ್ಬಿಸುತ್ತಿದ್ದಾರೆ. ಈ ಕೂಗು ಇದೀಗ ವಾಲ್ಮೀಕಿ ಜಾತ್ರೆಗೂ ವ್ಯಾಪಿಸಿದೆ. ಹೌದು…. ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ವ್ಯಕ್ತಿಯೋರ್ವ, ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಪ್ರಿಂಟೆಡ್ ಟಿ ಶರ್ಟ್ ಹಾಕಿಕೊಂಡು ಬಂದಿದ್ದಾನೆ. ಅಲ್ಲದೇ ಕೆಲವರು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂದು ಪೋಸ್ಟರ್ ಹಿಡಿದು ಜಾತ್ರೆಗೆ ಆಗಮಿಸಿ ಎಲ್ಲರ ಗಮನಸೆಳೆದಿದ್ದಾರೆ.
Latest Videos