Daali Dhananjay: ‘ಉತ್ತರಕಾಂಡ’ ಬಳಿಕ ಬೇರೆಯದ್ದೆ ಹಾದಿ ಹಿಡಿಯಲಿದ್ದೇನೆ: ಡಾಲಿ ಧನಂಜಯ್
Uttarakaanda: ಹೊಸ ರೀತಿಯ ಪಾತ್ರಗಳನ್ನು ಮಾಡುತ್ತಿದ್ದ ಕಾರಣ ಅಭಿಮಾನಿಗಳಿಗಾಗಿ ಒಂದು ಪ್ಯಾಕೇಜ್ ಕೊಡಲಾಗಿರಲಿಲ್ಲ, ಆ ಕೊರತೆಯನ್ನು 'ಉತ್ತರಕಾಂಡ' ಸಿನಿಮಾ ನೀಗಿಸುತ್ತದೆ. ಈ ಸಿನಿಮಾ ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ ಎಂದಿದ್ದಾರೆ ಡಾಲಿ.
ಡಾಲಿ ಧನಂಜಯ್ (Daali Dhananjay) ನಟನೆಯ ‘ಉತ್ತರಕಾಂಡ‘ (Uttarakaanda) ಸಿನಿಮಾದ ‘ಗಬ್ರು ಸತ್ಯ’ ಪಾತ್ರದ ವ್ಯಕ್ತಿತ್ವ ತೋರಿಸುವ ಟೀಸರ್ ಒಂದು ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಉತ್ತರಕಾಂಡ’ ಸಿನಿಮಾದ ಬಗ್ಗೆ ಮಾತನಾಡಿದ ಡಾಲಿ ಧನಂಜಯ್, ‘ಈ ಸಿನಿಮಾ ಅಭಿಮಾನಿಗಳಿಗಾಗಿ ಮಾಡಿದ ಸಿನಿಮಾ. ಶೂಟಿಂಗ್ಗಳಲ್ಲಿ ಸಿಕ್ಕಿದಾಗ ಅವರ ಆಸೆಗಳನ್ನು ವ್ಯಕ್ತಪಡಿಸುತ್ತಿದ್ದರು. ನಾನೂ ಸಹ ಬೇರೆ-ಬೇರೆ ರೀತಿಯ ಪಾತ್ರಗಳನ್ನು ಮಾಡುವ ಪ್ರಯೋಗ ಮಾಡುವ ಸಲುವಾಗಿ ಅಭಿಮಾನಿಗಳಿಗಾಗಿ ಪ್ಯಾಕೇಜ್ ಅನ್ನು ಕೊಡಲಾಗಿರಲಿಲ್ಲ. ಅದನ್ನು ಉತ್ತರಕಾಂಡ ಸಿನಿಮಾ ಮೂಲಕ ಮಾಡುತ್ತಿದ್ದೇನೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ